ಬೌದ್ಧ ಧರ್ಮವನ್ನು ಅಪಹಾಸ್ಯ ಮಾಡುತ್ತಿರುವ ದಲಾಯಿ ಲಾಮಾ: ಚೀನಾ
ಬೀಜಿಂಗ್, ಮಾ. 28: ತಾನು ಮರುಜನ್ಮ ಹೊಂದಲಿಕ್ಕಿಲ್ಲ ಅಥವಾ ಮರುಜನ್ಮವೆನ್ನುವುದು ಇಲ್ಲ ಎಂದು ಹೇಳುವ ಮೂಲಕ ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಟಿಬೆಟ್ ಬೌದ್ಧ ಧರ್ಮವನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಚೀನಾ ಹೇಳಿದೆ.
ಹಿರಿಯ ಲಾಮಾರ ಆತ್ಮವು ಅವರ ಮರಣದ ದಿನದಂದು ಒಂದು ಮಗುವಿನ ದೇಹದಲ್ಲಿ ಪುನರ್ಜನ್ಮ ಪಡೆಯುವುದು ಎಂಬ ನಂಬಿಕೆಯನ್ನು ಟಿಬೆಟ್ ಬೌದ್ಧ ಧರ್ಮ ಹೊಂದಿದೆ.
ಸಂಪ್ರದಾಯ ಮುಂದುವರಿಯಬೇಕು ಹಾಗೂ ಲಾಮಾರ ಉತ್ತರಾಧಿಕಾರಿಯನ್ನು ನೇಮಿಸುವ ಅಧಿಕಾರ ಚೀನಾದ ನಾಯಕರಿಗಿದೆ ಎಂದು ಚೀನಾ ಹೇಳುತ್ತಿದೆ.
Next Story





