ವಿವಾದಾಸ್ಪದ ದ್ವೀಪದಲ್ಲಿ ಜಪಾನ್‌ನಿಂದ ರಾಡಾರ್ ಕೇಂದ್ರ

ಟೋಕಿಯೋ, ಮಾ. 28: ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್ ಸೋಮವಾರ ರಾಡಾರ್ ಕೇಂದ್ರವೊಂದಕ್ಕೆ ಚಾಲನೆ ನೀಡಿದೆ. ಈ ಕೇಂದ್ರವು ತೈವಾನ್ ಮತ್ತು ಜಪಾನ್ ಮತ್ತು ಚೀನಾಗಳೆರಡೂ ಹಕ್ಕು ಸಾಧಿಸುತ್ತಿರುವ ವಿವಾದಾಸ್ಪದ ದ್ವೀಪ ಸಮೂಹಗಳ ಮೇಲೆ ಕಣ್ಗಾವಲು ಇಡಲಿದೆ.
ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್ ದ್ವೀಪಗಳ ಸಮೂಹದ ಪಶ್ಚಿಮ ತುದಿಯಲ್ಲಿರುವ ಯೊನಗುನಿ ದ್ವೀಪದಲ್ಲಿ ನೂತನ ರಾಡಾರ್ ಕೇಂದ್ರ ಅಸ್ತಿತ್ವಕ್ಕೆ ಬಂದಿದೆ. ಜಪಾನ್‌ನಲ್ಲಿರುವ ಸೆಂಕಾಕು ಮತ್ತು ಚೀನಾದಲ್ಲಿರುವ ಡಯೋಯು ವಿವಾದಾಸ್ಪದ ದ್ವೀಪಗಳ ದಕ್ಷಿಣಕ್ಕೆ 150 ಕಿ.ಮೀ. ದೂರದಲ್ಲಿ ಕೇಂದ್ರವಿದೆ.
Next Story





