ಜಾನುವಾರು ವ್ಯಾಪಾರಿಗಳ ಹತ್ಯೆ: ಪಿಎಫ್‌ಐ ಖಂಡನೆ
ಮಂಗಳೂರು, ಮಾ.28: ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯ ಬಾಲುಮಠದಲ್ಲಿ ಮುಸ್ಲಿಮ್ ಜಾನುವಾರು ವ್ಯಾಪಾರಿಗಳನ್ನು ಕ್ರೂರವಾಗಿ ಗಲ್ಲಿಗೇರಿಸಿರುವ ಘಟನೆಯನ್ನು ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ. ಶರೀಫ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆಯ ಆರೋಪಿಗಳು ಮತ್ತು ಅದರ ಹಿಂದಿನ ಎಲ್ಲಾ ಶಕ್ತಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕಾಗಿದೆ. ರಾಜ್ಯ ಸರಕಾರವು ಬಡ ಮುಸ್ಲಿಮ್ ಜಾನುವಾರು ವ್ಯಾಪಾರಿಗಳಿಗೆ ಮತ್ತು ಕುಟುಂಬಗಳಿಗೆ ಸೂಕ್ತ ಭದ್ರತೆ ನೀಡಬೇಕು. ಇಂತಹ ದುಷ್ಕೃತ್ಯ ಮಾಡುವವರ ವಿರುಧ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Next Story





