ಸೋಲಿನೊಂದಿಗೆ ವ್ಯಾಟ್ಸನ್ ವಿದಾಯ

ಮೊಹಾಲಿ, ಮಾ.28: ಆಸ್ಟ್ರೇಲಿಯದ ಆಲ್‌ರೌಂಡರ್ ಶೇನ್ ರಾಬರ್ಟ್ ವ್ಯಾಟ್ಸನ್ ಭಾರತ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನ ಅಂತಿಮ ಸೂಪರ್-10 ಪಂದ್ಯದಲ್ಲಿ ಸೋಲಿನೊಂದಿಗೆ ವಿದಾಯ ಹೇಳಿದ್ದಾರೆ.
ಆಸ್ಟ್ರೇಲಿಯದ ಪರವಾಗಿ ಒಟ್ಟು 307 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವ್ಯಾಟ್ಸನ್ ತನ್ನ ಕೊನೆಯ ಪಂದ್ಯದಲ್ಲಿ ಔಟಾಗದೆ 18 ರನ್ ಗಳಿಸಿದ್ದು. ಎರಡು ಪ್ರಮುಖ ವಿಕೆಟ್ ಉರುಳಿಸಿದ್ದರು. ಫೀಲ್ಡಿಂಗ್‌ನಲ್ಲೂ ಮಿಂಚುವ ಮೂಲಕ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. ಆದರೆ, ಆಸ್ಟ್ರೇಲಿಯ ಸೋಲುಂಡಿತ್ತು.
ಆಸ್ಟ್ರೇಲಿಯದ ಕ್ರಿಕೆಟ್‌ನಿಂದ ದೂರ ಸರಿದಿರುವ ವ್ಯಾಟ್ಸನ್ ಟ್ವೆಂಟಿ-20ಯಲ್ಲಿ ಹಲವು ದಾಖಲೆಯನ್ನು ಬರೆದಿದ್ದಾರೆ. ಅವುಗಳೆಂದರೆ....
ಆಸ್ಟ್ರೇಲಿಯದ ಪರ ಗರಿಷ್ಠ 48 ವಿಕೆಟ್ ಪಡೆದಿದ್ದಾರೆ
ಎರಡನೆ ಗರಿಷ್ಠ ಸ್ಕೋರ್(1462 ರನ್) ದಾಖಲಿಸಿದ್ದಾರೆ
ಎರಡನೆ ಶ್ರೇಷ್ಠ ಬೌಲಿಂಗ್(4/15) ಸಂಘಟಿಸಿದ್ದಾರೆ
ಎರಡನೆ ಶ್ರೇಷ್ಠ ವೈಯಕ್ತಿಕ ಸ್ಕೋರ್(ಔಟಾಗದೆ 124) ಬಾರಿಸಿದ್ದಾರೆ
2ನೆ ಅತ್ಯಂತ ಹೆಚ್ಚು ಪಂದ್ಯಗಳನ್ನು(58) ಆಡಿದ್ದಾರೆ
ಭಾರತದ ವಿರುದ್ಧ 8 ಇನಿಂಗ್ಸ್‌ಗಳಲ್ಲಿ 50.33ರ ಸರಾಸರಿಯಲ್ಲಿ 302 ರನ್ ಗಳಿಸಿದ್ದಾರೆ. ಭಾರತ ವಿರುದ್ಧ ಟಿ-20ಯಲ್ಲಿ 300ಕ್ಕೂ ಅಧಿಕ ರನ್ ಗಳಿಸಿದ ಆಸ್ಟ್ರೇಲಿಯದ ಮೊದಲ ದಾಂಡಿಗ







