ಗ್ರಾಪಂ ನೌಕರನಿಗೆ ಹಲ್ಲೆ
ಕಾಸರಗೋಡು, ಮಾ.28 : ವ್ಯಕ್ತಿಯೋರ್ವ ಪಂಚಾಯತ್ ನೌಕರನಿಗೆ ಹಲ್ಲೆ ಗೈದ ಘಟನೆ ಚೆಂಗಳದಲ್ಲಿ ನಡೆದಿದೆ. ಗಾಯಗೊಂಡ ಉದಿನೂರಿನ ಪಿ. ಸುರೇಶ್ (35) ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆರ್ಕಳ ಬಸ್ ನಿಲ್ದಾಣ ಸಮೀಪದ ಕಟ್ಟಡದಲ್ಲಿ ಅಂಗಡಿ ಪರವಾನಿಗೆ ಪಡೆಯಲು ಚೆಂಗಳದ ಮುಜೀಬ್ ಎಂಬಾತ ಅರ್ಜಿ ಸಲ್ಲಿಸಿದ್ದು , ಪರವಾನಿಗೆ ಕುರಿತು ವಿಚಾರಿಸಲು ಸೋಮವಾರ ಮಧ್ಯಾಹ್ನ ವೇಳೆ ಪಂಚಾಯತ್ ಕಚೇರಿಗೆ ಬಂದಿದ್ದ. ಈ ವೇಳೆ ಮುಜೀಬ್ ಹಲ್ಲೆ ನಡೆಸಿರುವುದಾಗಿ ಸುರೇಶ್ ದೂರಿದ್ದಾರೆ.
Next Story





