ಮಾರುತಿ ಫ್ರೆಂಡ್ಸ್ ಕ್ಲಬ್ ಉದ್ಘಾಟನೆ
ಮೂಡುಬಿದಿರೆ, ಮಾ.28: ಪಡುಮಾರ್ನಾಡು ಗ್ರಾಮದ ಮುನ್ನೇರಿನ ಮಾರುತಿ ಫ್ರೆಂಡ್ಸ್ ಕ್ಲಬ್ನ್ನು ಗೌರವಾಧ್ಯಕ್ಷ ಎಂ. ದಯಾನಂದ ಪೈ ಇತ್ತೀಚೆಗೆ ಉದ್ಘಾಟಿಸಿದರು. ಉದ್ಯಮಿ ಪ್ರಶಾಂತ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಜಯ ಕೋಟ್ಯಾನ್, ಸಂಘದ ಅಧ್ಯಕ್ಷ, ಉಮೇಶ್ ಕುಮಾರ್, ಕಾರ್ಯದರ್ಶಿ ಜಿತೇಶ್ ಕೋಟ್ಯಾನ್, ಉಪಾಧ್ಯಕ್ಷ ಪ್ರಶಾಂತ ಹೆಗ್ಡೆ, ಸಲಹಾ ಸಮಿತಿ ಸದಸ್ಯ ಶ್ರೀಧರ ವಾಮನ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
Next Story