ಜಾಟ್ ಮೀಸಲಾತಿ ಮಸೂದೆಗೆ ಹರ್ಯಾಣ ಸಂಪುಟ ಅಸ್ತು

ಚಂಡೀಗಢ, ಮಾ.28: ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಜಾಟ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧದ ಮಸೂದೆಗೆ ಹರ್ಯಾಣ ಸಂಪುಟ ಅನುಮೋದನೆ ನೀಡಿದೆ. ಚಳವಳಿನಿರತ ಜಾಟ್ ಸಮುದಾಯದ ಮುಖಂಡರು ಸರಕಾರಕ್ಕೆ ತಮ್ಮ ಬೇಡಿಕೆ ಈಡೇರಿಸಲು ಎಪ್ರಿಲ್ 3ರ ಗಡುವು ನೀಡಿದ್ದರು.
ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಜಾಟ್ ಹಾಗೂ ಇತರ ನಾಲ್ಕು ಸಮುದಾಯಗಳಿಗೆ ಮೀಸಲಾತಿ ನೀಡುವ ಕರಡು ಮಸೂದೆಗೆ ಒಪ್ಪಿಗೆ ನೀಡಲಾಯಿತು.
ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಈಗಲೇ ಮಂಡಿಸಲು ಸರಕಾರ ನಿರ್ಧರಿಸಿದೆ. ಮಾರ್ಚ್ 31ರವರೆಗೆ ಅಧಿವೇಶನ ನಡೆಯಲಿದೆ.
ಬಜೆಟ್ ಅಧಿವೇಶನದಲ್ಲೇ ಈ ಕುರಿತ ಮಸೂದೆ ಮಂಡಿಸುವುದಾಗಿ ಬಿಜೆಪಿ ಸರಕಾರ ಭರವಸೆ ಕೊಟ್ಟಿತ್ತು.
Next Story





