ರಸ್ತೆ ಬದಿಯಲ್ಲಿ ಅಂಚೆ ಕಚೇರಿಯ ಪಾರ್ಸೆಲ್!
ಕಾರ್ಕಳ ಅಂಚೆ ಕಚೇರಿಯ ಪಾರ್ಸೆಲ್ ಮೂಡುಬಿದಿರೆಯಲ್ಲಿ ಪತ್ತೆ
ಮೂಡುಬಿದಿರೆ, ಮಾ.28: ಕಾರ್ಕಳ ಅಂಚೆ ಕಚೇರಿಯಿಂದ ಮೂಡುಬಿದಿರೆ ಅಂಚೆ ಕಚೇರಿಗೆ ಖಾಸಗಿ ಬಸ್‌ನಲ್ಲಿ ಕಳುಹಿಸಿದ ಪಾರ್ಸೆಲ್ ಜೈನ್‌ಪೇಟೆ ಬಳಿ ರಸ್ತೆ ಬದಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದು,್ದ ಸಾರ್ವಜನಿಕರು ಮೂಡುಬಿದಿರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿನ್ನದ ವ್ಯಾಪಾರಿ ಹರಿಪ್ರಸಾದ್ ಎಂಬವರು ಸೋಮವಾರ ಸಂಜೆ ಬೈಕ್‌ನಲ್ಲಿ ಜೈನ್‌ಪೇಟೆ ಮಾರ್ಗವಾಗಿ ಮೂಡುಬಿದಿರೆಗೆ ಬರುತ್ತಿದ್ದಾಗ ರಸ್ತೆಬದಿಯಲ್ಲಿ ಪಾರ್ಸೆಲ್ ಬಿದ್ದಿರುವುದನ್ನು ಗಮನಿಸಿದರು. ವಿಷಯವನ್ನು ಮಾಧ್ಯಮದವರ ಮೂಲಕ ಪೊಲೀಸರಿಗೆ ತಿಳಿಸಿ ನಂತರ ತನ್ನ ಸ್ನೇಹಿತ ಸೂರಜ್ ಬನ್ನಡ್ಕ ಜೊತೆ ಪಾರ್ಸೆಲನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.
Next Story





