Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ತಮಿಳುನಾಡು ರಾಜಕೀಯದಲ್ಲಿ ಮುಂದುವರಿದ...

ತಮಿಳುನಾಡು ರಾಜಕೀಯದಲ್ಲಿ ಮುಂದುವರಿದ ಚದುರಂಗದಾಟ..!

ಕು.ಸ.ಮಧುಸೂದನ ರಂಗೇನಹಳ್ಳಿಕು.ಸ.ಮಧುಸೂದನ ರಂಗೇನಹಳ್ಳಿ28 March 2016 11:52 PM IST
share
ತಮಿಳುನಾಡು ರಾಜಕೀಯದಲ್ಲಿ ಮುಂದುವರಿದ ಚದುರಂಗದಾಟ..!

ಭಾಜಪ ಮತ್ತು ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ನಾಮಪತ್ರ ಸಲ್ಲಿಸುವ ದಿನಾಂಕ ಸಮೀಪಿಸುವ ಮುಂಚೆಯೇ ದೊಡ್ಡದೊಂದು ಆಘಾತ ಏರ್ಪಟ್ಟಿದೆ. ಕಳೆದ ವಾರವಷ್ಟೇ ಡಿಎಂಕೆ ಜೊತೆಗಿನ ಮೈತ್ರಿ ಮಾತುಕತೆಗಳಿಂದ ಹೊರನಡೆದು ಡಿಎಂಕೆವಲಯದಲ್ಲಿ ಭಾರೀ ನಿರಾಸೆಯನ್ನೂ, ಭಾಜಪದಲ್ಲೊಂದಿಷ್ಟು ಆಶಾಕಿರಣವನ್ನು ಮೂಡಿಸಿದ್ದ ನಟ ವಿಜಯಕಾಂತ್ ಅವರ ಡಿಎಂಡಿಕೆ ಇದೀಗ ಪೀಪಲ್ಸ್ ವೆಲ್‌ಫೇರ್ ಫ್ರಂಟ್ ಜೊತೆಗೆ ಮೈತ್ರಿ ಮಾಡಿಕೊಂಡು ಎರಡೂ ಪಕ್ಷಗಳಿಗೂ ಬಾರಿ ನಿರಾಸೆಯನ್ನುಂಟು ಮಾಡಿದೆ. ಇದೀಗ ಡಿಎಂಡಿಕೆಜೊತೆ ಮೈತ್ರಿಮಾಡಿಕೊಂಡಿರುವ ಪಿಡಬ್ಲ್ಯೂಎಫ್‌ ತೀರಾ ಹಳೆಯ ಮೈತ್ರಿಕೂಟವೇನಲ್ಲ, ಬದಲಿಗೆ ಕಳೆದ ನವೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅದರೊಳಗೆ ವೈಕೊರವರ ಎಂಡಿಎಂಕೆ, ವಿಸಿಕೆ, ಮತ್ತು ಎರಡು ಎಡಪಕ್ಷಗಳಾದ ಸಿಪಿಎಂ ಹಾಗೂ ಸಿಪಿಐಗಳು ಸೇರಿವೆ. ಈ ಹೊಸ ಮೈತ್ರಿಯ ಪ್ರಕಾರ ಇರುವ ಒಟ್ಟು 134 ಸ್ಥಾನಗಳ ಪೈಕಿ ವಿಜಯಕಾಂತ್ ಅವರ ಡಿಎಂಡಿಕೆ 124 ಸ್ಥಾನಗಳಿಗೂ, ಪಿ.ಡಬ್ಕ್ಯೂ.ಎಫ್‌. ಉಳಿದ 110 ಸ್ಥಾನಗಳಿಗೂ ಸ್ಪರ್ಸುವ ನಿರ್ಧಾರಕ್ಕೆ ಬಂದಿವೆ.

 ಡಿಎಂಕೆ ಈ ಬಾರಿ ವಿಜಯಕಾಂತರ ಜೊತೆ ಮೈತ್ರಿಗೆ ಶತಾಯಗತಾಯ ಪ್ರಯತ್ನ ನಡೆಸಿ ವಿಫಲವಾಯಿತು. ವಿಜಯಕಾಂತರ ಜನಪ್ರಿಯತೆ ಮತ್ತು ಜಾತಿ ಪರಿಗಣನೆಯನ್ನಿಟ್ಟುಕೊಂಡು ಲೆಕ್ಕಹಾಕಿದ್ದ ಡಿಎಂಕೆ ಅವರ ಸಹಯೋಗದೊಂದಿಗೆ ಸುಮಾರು 70 ರಿಂದ 80 ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕಿತ್ತು. ಆದರೆ ಮೈತ್ರಿ ಮಾತುಕತೆಯಿಂದ ಹಿಂದೆ ಸರಿದ ವಿಜಯ್ ಕಾಂತ್ ನಡೆ ಇದೀಗ ಡಿಎಂಕೆ ಪಾಳಯದಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕರುಣಾನಿಯವರು ಡಿಎಂಡಿಕೆ ಮೈತ್ರಿಯಿಂದ ಹೊರಹೋಗಿರುವುದರಿಂದ ತಮ್ಮ ಪಕ್ಷದ ಗೆಲುವಿಗೆ ಯಾವ ತೊಂದರೆಯಿಲ್ಲವೆಂದು ಮುಖ ಉಳಿಸಿಕೊಳ್ಳುವ ಹೇಳಿಕೆ ನೀಡಿದ್ದರೂ ವಾಸ್ತವ ಬೇರೆಯೇ ಇದೆ. ಹೀಗೆ ಚುನಾವಣೆಗೂ ಮೊದಲೇ ಡಿಎಂಕೆಯ ಮಹತ್ವಾಕಾಂಕ್ಷೆಗೆ ತಣ್ಣೀರೆರಚಿದಂತಾಗಿದೆ.

   ಸದರಿ ಮೈತ್ರಿಯ ಮಾತುಕತೆ ಮುರಿದು ಬಿದ್ದಾಗ ಭಾಜಪ ತುಂಬಾ ಸಂತೋಷಪಟ್ಟಿತ್ತು. ಯಾಕೆಂದರೆ ಎರಡೂ ದ್ರಾವಿಡ ಪ್ಷಗಳನ್ನು ತಿರಸ್ಕರಿಸಿ ಹೊರಬಂದ ವಿಜಯಕಾಂತ್ ಖಂಡಿತಾ ಭಾಜಪದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆಂಬ ಭಾರೀ ನಿರೀಕ್ಷೆಯಿಟ್ಟುಕೊಂಡಿತ್ತು. ಈ ಬಗ್ಗೆ ಚರ್ಚಿಸಲು ರಾಜ್ಯ ನಾಯಕತ್ವವನ್ನು ಬಳಸಿಕೊಳ್ಳದೆ ಸ್ವತಃ ಭಾಜಪದ ಅಧ್ಯಕ್ಷರಾದ ಅಮಿತ್ ಶಾ ರವರೇ ವಿಜಯಕಾಂತ್ ಜೊತೆ ಮಾತುಕತೆ ನಡೆಸಿದ್ದರು. ಆದರೆ ಪ್ರತಿಭಾವಂತ ನಟ ವಿಜಯಕಾಂತ್ ಸಿನಿಮೀಯ ಶೈಲಿಯಲ್ಲಿಯೇ ಮಾತುಕತೆಯನ್ನು ಮುರಿದು ಎಲ್ಲರ ಅಚ್ಚರಿಗೂ ಕಾರಣವಾಗುವಂತೆ ಪಿಡಬ್ಲ್ಯೂಎಫ್‌ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ತಮಿಳುನಾಡಿನ ರಾಜಕೀಯದಲ್ಲಿ ದ್ರಾವಿಡ ಪಕ್ಷಗಳ ಸಾರ್ವಭೌಮತೆ ಕಡಿಮೆಯಾಗುತ್ತಿದೆ ಮತ್ತು ಅವುಗಳ ಸ್ಥಾನದಲ್ಲಿ ತನ್ನ ಹಿಂದುತ್ವದ ಅಜೆಂಡಾ ಮೂಲಕ ಕಾಲೂರಿ ನಿಲ್ಲ ಬಹುದೆಂಬ ಭಾಜಪದ ಅತಿಯಾಸೆಗೆ ತಕ್ಷಣಕ್ಕಂತು ಕೊಡಲಿಯೇಟು ಬಿದ್ದಿದೆ. ಜೊತೆಗೆ ದ್ರಾವಿಡ ಪಕ್ಷಗಳನ್ನು ತೊರೆದರೂ ಭಾಜಪದಂತಹ ಹಿಂದಿಗೆ ಮಹತ್ವ ನೀಡುವ ಹಿಂದುತ್ವದ ಪಕ್ಷಕ್ಕೆ ಬೆಂಬಲ ನೀಡಿದರೆ ಈಗಿರುವ ತನ್ನ ನೆಲೆಯನ್ನೂ ಕಳೆದುಕೊಳ್ಳಬಹುದೆಂಬ ಅರಿವಿನಿಂದಲೇ ವಿಜಯಕಾಂತ್ ಅಂತಿಮವಾಗಿ ತಮಿಳು ಹಿತಾಸಕ್ತಿ ಕಡೆಗೆ ಹೆಚ್ಚು ಒಲವು ತೋರುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದರಿಂದಾಗಿ ನಾನು ಮೊದಲೇ ಹೇಳದಂತೆ ತಮಿಳು ನಾಡಿನಲ್ಲೀಗ ಬಹುಕೋನ ಸ್ಪರ್ಧೆ ಏರ್ಪಟ್ಟಿದ್ದು ಇದರ ಲಾಭ ಹಾಲಿ ಮುಖ್ಯಮಂತ್ರಿಯಾದ ಕುಮಾರಿ ಜಯಲಲಿತಾರವರ ಎಐಎಡಿಎಂಕೆ ಪಕ್ಷಕ್ಕೆ ಆಗಬಹುದಾದ ನಿರೀಕ್ಷೆಯಿದೆ.

share
ಕು.ಸ.ಮಧುಸೂದನ ರಂಗೇನಹಳ್ಳಿ
ಕು.ಸ.ಮಧುಸೂದನ ರಂಗೇನಹಳ್ಳಿ
Next Story
X