ಲಿಯೊ ವಾಲ್ಟರ್ ನೊರೊನ್ಹ ನಿಧನ
ಶಿರ್ವ, ಮಾ.28: ಬಂಟಕಲ್ಲು ಸಮೀಪದ ಪಾಂಬೂರು ನಿವಾಸಿ, ಅನಿವಾಸಿ ಭಾರತೀಯ ಲಿಯೊ ವಾಲ್ಟರ್ ನೊರೊನ್ಹ (68) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನರಾದರು.
ವರು ಶಿರ್ವ ರೋಟರಿಯ ಪೂರ್ವಾಧ್ಯಕ್ಷರಾಗಿದ್ದು, ಪಾಂಬೂರು ಹಾಗೂ ಶಿರ್ವ ಚರ್ಚ್ಗಳ ವಿವಿಧ ಸಮಿತಿಗಳು, ಶಿರ್ವ ಸಂತಮೇರಿ ಪ.ಪೂ.ಕಾಲೇಜಿನ ಹಳೆವಿದ್ಯಾರ್ಥಿ ಸಂಘ, ಕೆಥೊಲಿಕ್ ಸಭಾ, ವಿನ್ಸೆಂಟ್ ಡಿ.ಪೌಲ್ ಸೊಸೈಟಿ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ಅಪಾರ ಬಂಧುಗಳನ್ನು ಅಗಲಿದ್ದು, ಅಂತ್ಯಕ್ರಿಯೆ ಪ್ರಾರ್ಥನಾವಿಧಿಯು ಮಾ.30ರಂದು ಸಂಜೆ 4ಕ್ಕೆ ಪಾಂಬೂರು ಹೋಲಿಕ್ರಾಸ್ ಚರ್ಚ್ ನಲ್ಲಿ ನೆರವೇರಲಿದೆ.
Next Story