ಶಾಂತಿ ನೆಲೆಸಿದರೆ ಅಫ್ಘಾನಿಸ್ತಾನ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಲಿದೆ: ಕೋಚ್, ಇಂಝಮಾಮುಲ್ ಹಕ್

ನಾಗಪುರ, ಮಾ.29: ಐಸಿಸಿ ಟ್ವಿಂಟಿ-20 ವಿಶ್ವಕಪ್‌ನಲ್ಲಿ ತನ್ನ ತಂಡದ ಐತಿಹಾಸಿಕ ಗೆಲುವಿನಿಂದ ಉತ್ಸಾಹಿತರಾದ ಅಫ್ಘಾನಿಸ್ತಾನದ ಬ್ಯಾಟಿಂಗ್ ಕೋಚ್ ಇಂಝಮಾಮುಲ್ ಹಕ್ ದೇಶದಲ್ಲಿ ಶಾಂತಿ ನೆಲೆಸಿದರೆ ಮತ್ತು ಸವಲತ್ತುಗಳು ಲಭಿಸಿದರೆ ಅಫ್ಘಾನಿಸ್ತಾನ ಕ್ರೀಡೆಯಲ್ಲಿ ಪ್ರಗತಿ ಸಾಧಿಸಬಹುದಾಗಿದೆ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಅಫ್ಘಾನಿಸ್ತಾನ ಕೊನೆಯ ಗ್ರೂಪ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ್ನು ಆರು ರನ್‌ಗಳಿಂದ ಸೋಲಿಸಿತ್ತು. ಇಂಝಮಾಮ್ ಪ್ರತಿಕ್ರಿಯಿಸುತ್ತಾ ಕಳೆದ ಮೂರು ವರ್ಷಗಳಲ್ಲಿ ಬಹಳಷ್ಟು ಬದಲಾವಣೆ ಆಗಿವೆ. ಇದು ಕೇವಲ ಕ್ರಿಕೆಟ್‌ಗೆ ಮಾತ್ರವಲ್ಲ ಬದಲಾಗಿ ಫುಟ್‌ಬಾಲ್ ಮತ್ತು ಇತರ ಆಟಗಳಿಗೂ ಯಾವುದೇ ದೇಶಕ್ಕಾಗಿ ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಂತಿ ಮತ್ತು ಸೌಲಭ್ಯಗಳು ದೊರೆತವೆಂದಾದರೆ ಪ್ರದರ್ಶನ ಉತ್ತಮವಾಗಬಹುದು. ನಾವು ಹೇಗೆ ಬಯಸುತ್ತೇವೋ ಆ ರೀತಿ ಆಡಲು ಆಗಿಲ್ಲ. ಆದರೆ ದುರ್ಬಲ ತಂಡದಂತೆ ಆಡಿಲ್ಲ ಎಂದು ಇಂಝಮಾಮ್ ಹೇಳಿದ್ದಾರೆ.
ಅವರು ತಂಡದ ಆತ್ಮವಿಶ್ವಾಸವನ್ನು ಹೊಗಲಿದ್ದು ಇದುವೇ ನಮಗೆ ಬಹುದೊಡ್ಡ ವಿಜಯವೆಂದು ಹೇಳಿದ್ದಾರೆ. ವನ್‌ಡೆ ಇರಲಿ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಇರಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಗೆದ್ದಿರಲಿಲ್ಲ. ಇದು ಅವಕಾಶ ಸಿಕ್ಕರೆ ತಂಡ ಉತ್ತಮ ಪ್ರದರ್ಶನ ತೋರಲಿದೆ ಎಂಬುದರ ಸಂಕೇತವಾಗಿದೆ ಎಂದು ಇಂಝಮಾಮ್ ಅಫ್ಘಾನಿಸ್ತಾನ ತಂಡ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಗೆದ್ದಿರುವುದನ್ನು ವಿಶ್ಲೇಷಿಸಿದ್ದಾರೆ.







