ಪಾಕಿಸ್ತಾನ ತನಿಖಾ ತಂಡಕ್ಕೆ ಪಠಾಣ್‌ಕೋಟ್ ಭೇಟಿಗೆ ಅವಕಾಶವನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಪಠಾಣ್ ಕೋಟ್, ಮಾ.29: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಪ್ರತ್ಯೇಕ ತನಿಖೆಗೆ ಪಂಜಾಬ್ ನಲ್ಲಿ ವಿರೋಧ ವ್ಯಕ್ತವಾಗಿದ್ದು, ಪಂಜಾಬ್‌ನ ವಾಯುನೆಲೆಯ ಮುಂದೆ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಯಿತು.
ಪಾಕಿಸ್ತಾನದ ಐವರು ಸದಸ್ಯರ ತನಿಖಾ ತಂಡಕ್ಕೆ ವಾಯುನೆಲೆಗೆ ಭೇಟಿ ನೀಡಿ ತನಿಖೆಗೆ ಅವಕಾಶ ನೀಡಿರುವದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದ ನೂರಾರು ಮಂದಿ ಭಿತ್ತಿಪತ್ರಗಳನ್ನು ಹಿಡಿದು ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಏರ್‌ಬೆಸ್‌ಗೆ ಪಾಕ್ ನ ತನಿಖಾ ತಂಡಕ್ಕೆ ಭೇಟಿ ನೀಡಲು ಅವಕಾಶ ನೀಡಿದ ಸರಕಾರದ ಕ್ರಮವನ್ನು ಖಂಡಿಸಿದರು.
Next Story





