ಒಂದು ವೇಳೆ ತಾನು ಬಂಧನವನ್ನು ವಿರೋಧಿಸಿದ್ದರೆ ರಾವತ್ ಕೊಲ್ಲಿಸುತ್ತಿದ್ದರು: ಶಕ್ತಿಮಾನ್ ಕಾಲು ಮುರಿದ ಶಾಸಕನ ಹೇಳಿಕೆ
.jpg)
ಡೆಹ್ರಾಡೂನ್, ಮಾ. 29: ಶಕ್ತಿಮಾನ್ ಕುದುರೆಯ ಕಾಲು ಮುರಿದ ಪ್ರಕರಣದ ಉತ್ತರಖಂಡ ಮಸೂರಿ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ ಜೋಶಿ ಒಂದು ವೇಳೆ ತಾನು ತನ್ನ ಬಂಧನವನ್ನು ವಿರೋಧಿಸಿದ್ದರೆ ಗುಂಡು ಹೊಡೆದು ಸಾಯಿಸಲಾಗುತ್ತಿತ್ತು ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಬಂಧನಕ್ಕೊಳಗಾದ ದಿನ ಸ್ವಲ್ಪವಾದರೂ ವಿರೋಧಿಸಿದ್ದರೆ ಹರೀಶ್ ರಾವತ್‌ರ ಆದೇಶ ಪ್ರಕಾರ ತನ್ನನ್ನು ಗುಂಡಿಟ್ಟು ಸಾಯಿಸಲಾಗುತ್ತಿತ್ತು. ದೇವನ ಕೃಪೆಯಿಂದಾಗಿ ತನಗೆ ನ್ಯಾಯಾಲಯ ಜಾಮೀನು ಅನುಮತಿಸಿದೆ ಎಂದು ಜೋಶಿ ಹೇಳಿದರು.
ದಿಲ್ಲಿಯಿಂದ ಮರಳಿದ ಬಳಿಕ ತನ್ನ ಸ್ವಗೃಹದಲ್ಲಿ ಸ್ವಾಗತಿಸಲು ಬಂದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುತ್ತ ಕಾಂಗ್ರೆಸ್‌ನ ರಾಜ್ಯ ಸರಕಾರ ಜನರನ್ನು ದೋಚಲು ಪ್ರಯತ್ನಿಸಿತು ಅದರ ಪ್ರತಿಫಲವನ್ನು ಅದೀಗ ಅನುಭವಿಸಬೇಕಾಗಿದೆ ಎಂದು ಹೇಳಿದ್ದಾರೆ.
ಅವರು ಘಟನೆಯ ಸಂಪೂರ್ಣ ಚಿತ್ರವನ್ನು ಕಾರ್ಯಕರ್ತರಿಗೆ ವಿವರಿಸುತ್ತಾ ಜೈಲಿಗೆ ಹೋಗಿ ತಾನೇನನ್ನೂ ಕಳಕೊಂಡೆ ಏನನ್ನು ಪಡಕೊಂಡೆ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದೇನೆ. ಅದರಂತೆ ತಾನೇನನ್ನೂ ಕಳಕೊಂಡಿಲ್ಲ ಪಡೆದುಕೊಂಡಿದ್ದೇನೆ ಎಂದು ಜೋಶಿ ಅಭಿಪ್ರಾಯಿಸಿದ್ದಾರೆ.
ದೇವನು ಎಲ್ಲರನ್ನೂ ಆಲಿಸುತ್ತಾನೆ. ಮತ್ತು ಮಾನವ ಹಿತಕ್ಕಾಗಿ ದೇವನು ಶಕ್ತಿ ನೀಡುತ್ತಾನೆ ಎಂದ ಅವರು ಹರೀಶ್ ರಾವತ್ ತನ್ನನ್ನು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ತನ್ನ ಕಾಲಿಗೆ ಕೊಡಲಿ ಹಾಕಿಕೊಂಡರೆಂದು ಲೇವಡಿ ಮಾಡಿರುವುದಾಗಿ ವರದಿ ಮಾಡಿದ್ದಾರೆ.







