ಸೌದಿ ಸಂಕಟ : ತಿಂಗಳುಗಳಿಂದ ಪಾವತಿಗಾಗಿ ಕಾಯುತ್ತಿರುವ ಗುತ್ತಿಗೆ ಕಂಪೆನಿಗಳ ನೌಕರರು

ರಿಯಾಧ್ : ಕಳೆದ ಎರಡು ವರ್ಷಗಳಲ್ಲಿ ತೈಲ ಬೆಲೆಗಳ ತೀವ್ರ ಕುಸಿತದಿಂದ ಕಂಗಾಲಾಗಿರುವ ಸೌದಿ ಸರಕಾರದಿಂದ ತನಗೆ ಬರಬೇಕಾಗಿರುವ ಬಾಕಿಗಾಗಿ ಕಾದಿರುವ ಲೆಬನಾನಿನ ಬಿಲಿಯಾಧಿಪತಿ ಹಾಗೂ ಮಾಜಿ ಪ್ರಧಾನಿ ಸಾದ್ ಹರಿರಿಯ ಒಡೆತನದ ಖ್ಯಾತ ನಿರ್ಮಾಣ ಕಂಪೆನಿ ಸೌದಿ ಓಗರ್‌ನ ಸಾವಿರಾರು ಉದ್ಯೋಗಿಗಳು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಬಾಕಿ ವೇತನಕ್ಕಾಗಿ ಜಾತಕಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
ಈ ಸಮಸ್ಯೆ ಸೌದಿ ಓಗರ್ ಕಂಪೆನಿಯದ್ದೊಂದೇ ಇಲ್ಲ, ಇತರ ಗುತ್ತಿಗೆ ಕಂಪೆನಿಗಳ ಉದ್ಯೋಗಿಗಳೂ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸೌದಿ ಓಗರ್‌ನಲ್ಲಿ ವಿವಿಧ ದೇಶಗಳ ಸುಮಾರು 50,000 ಉದ್ಯೋಗಿಗಳಿದ್ದು ಹೆಚ್ಚಿನವವರಿಗೆ ಕಳೆದ ಆರು ತಿಂಗಳುಗಳಿಂದ ವೇತನ ಸಿಕ್ಕಿಲ್ಲ. ಬೇರೆ ಕೆಲಸವನ್ನೂ ಹುಡುಕಲು ಅವರು ಅಸಮರ್ಥರಾಗಿರುವುದರಿಂದ ಅವರು ಇದೇ ನೌಕರಿಯಲ್ಲಿ ಅನಿವಾರ್ಯವಾಗಿ ಮುಂದುವರಿದಿದ್ದಾರೆ.
ಈ ಪರಿಸ್ಥಿತಿಗೆ ಕೆಟ್ಟ ಆಡಳಿತ ನಿರ್ವಹಣೆ ಒಂದು ಕಾರಣವೆಂದು ಹೇಳಲಾಗುತ್ತಿದ್ದರೆದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳು ಇನ್ನೊಂದು ಪ್ರಮುಖ ಕಾರಣವಾಗಿದೆ.ಈ ಸವಸ್ಯೆ ಕಂಪೆನಿಯ ಕೆಳ ಸ್ಥಳದ ನೌಕರರನ್ನು ತೀವ್ರವಾಗಿ ಬಾಧಿಸಿದ್ದು ಅವರಿಗೆ ಜೀವನ ನಿರ್ವಹಣೆ ಮಾಡುವುದೇ ದುಸ್ಸಾಹಸವಾಗಿ ಬಿಟ್ಟಿದೆ.
ರಿಯಾಧ್‌ನ ರಿಟ್ಜ್ ಕಾರ್ಲ್‌ಟನ್ ಹೊಟೇಲ್ ಕಟ್ಟಡಸೇರಿದಂತೆ ಹಲವಾರು ಖ್ಯಾತ ಕಟ್ಟಡಗಳನ್ನು ಕಂಪೆನಿ ನಿರ್ಮಿಸಿದ್ದು ಇನ್ನೂ ಹಲವು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ.







