ಉತ್ತರ ಪ್ರದೇಶದಲ್ಲಿ 100+ ಸ್ಥಾನದ ಟಾರ್ಗೆಟ್, 400 ಕೋಟಿ ಬಜೆಟ್
ಪ್ರಶಾಂತ್ ಕಿಶೋರ್ ಮಾಸ್ಟರ್ ಪ್ಲಾನ್ ವಿವರಗಳು ಇಲ್ಲಿವೆ

ನವದೆಹಲಿ : ಉತ್ತರ ಪ್ರದೇಶದಲ್ಲಿನೂರು ಪ್ಲಸ್ ಸ್ಥಾನದ ಟಾರ್ಗೆಟ್, ಚುನಾವಣಾ ಪ್ರಚಾರಕ್ಕಾಗಿ ರೂ. 400 ಕೋಟಿಯ ಬಜೆಟ್, 500 ಮಂದಿಯ ಕಾರ್ಯ ತಂಡ, ರಾಹುಲ್ ಗಾಂಧಿಯವರಿಂದ 200 ರ್ಯಾಲಿಗಳು, ಪ್ರಚಾರದ ಮುಖ್ಯ ಭೂಮಿಕೆಯಲ್ಲಿ ಪ್ರಿಯಾಂಕ ಗಾಂಧಿ ವಾದ್ರ ಹಾಗೂ ಬಿಹಾ ಮಾದರಿಯಲ್ಲಿ ಮಹಾ ಮೈತ್ರಿಯ ಸ್ಥಾಪನೆ- ಇವಿಷ್ಟು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಮುಂಚೂಣಿ ಪಡೆಯಲುಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ತಯಾರಿಸಿರುವ ಮಾಸ್ಟರ್ ಪ್ಲಾನ್.
ಈ ಹಿಂದೆ ಬಿಜೆಪಿ ಹಾಗೂ ಜೆಡಿ(ಯು)ವಿಗಾಗಿ ಕಾರ್ಯನಿರ್ವಹಿಸಿರುವ ಕಿಶೋರ್ ಅವರನ್ನು ಈ ಬಾರಿ ಕಾಂಗ್ರೆಸ್ ತನ್ನ ತನ್ನತ್ತ ಸೆಳೆದಿದ್ದು ತಮ್ಮ ಮಾಸ್ಟರ್ ಪ್ಲಾನ್ ಬಗ್ಗೆ ಸ್ವತಃ ಕಿಶೋರ್ ಏನನ್ನೂ ಹೇಳದಿದ್ದರೂ, ತಮ್ಮ ಹೆಸರು ಬಹಿರಂಗಪಡಿಸಲಿಚ್ಛಿಸದ ಪಕ್ಷದ ಕೆಲ ಹಿರಿಯ ನಾಯಕರು ಕೆಲವೊಂದು ಮಾಹಿತಿಗಳನ್ನು ಇಕನಾಮಿಕ್ ಟೈಮ್ಸ್ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಪ್ರಿಯಾಂಕರ ಪಾತ್ರವನ್ನು ಕೇವಲ ಗಾಂಧಿಗಳ ಕ್ಷೇತ್ರ ಅಮೇಠಿ, ರಾಯ್‌ಬರೇಲಿಗೆ ಸೀಮಿತಗೊಳಿಸುವಂತಿಲ್ಲವೆಂದು ಕಿಶೋರ್ ಸ್ಪಷ್ಟಪಡಿಸಿದ್ದಾರೆಂದು ಕೆಲ ನಾಯಕರು ತಿಳಿಸಿದ್ದಾರೆ.ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೇಂ ಚೇಂಜರ್‌ನ ಅಗತ್ಯವಿದ್ದು ಅದು ಪ್ರಿಯಾಂಕ ಆಗಬಲ್ಲರು ಎಂದು ಕಿಶೋರ್ ಸಂಸ್ಥೆ-ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ ತಿಳಿಸಿದೆ.
ರಾಹುಲ್ ಗಾಂಧಿ ವ್ಯಾಪಕ ಪ್ರಚಾರ ಕೈಗೊಂಡ ಹೊರತಾಗಿಯೂ ರಾಜ್ಯದಲ್ಲಿ 2012ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಕೇವಲ 28 ಕ್ಷೇತ್ರಗಳಲ್ಲಿ ಜಯ ಸಾಧಿಸಿ ನಾಲ್ಕನೇ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.‘‘ಪ್ರಿಯಾಂಕರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಬೇಕೆಂದು ಕಿಶೋರ್ ನಿರೀಕ್ಷಿಸುತ್ತಿರಬಹುದು. ಆದರೆ ಅದು ಕಷ್ಟ,’ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಇನ್ನೊಂದೆಡೆ ಕಿಶೋರ್ ಮಾಜಿ ದೆಹಲಿ ಮುಖ್ಯಮಂತ್ರಿ ಶೀಲ ದೀಕ್ಷಿತ್ ಅವರ ಸಾಮರ್ಥಿಕೆಯ ಮೇಲೂ ತಮ್ಮ ದೃಷ್ಟಿ ನೆಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಹಿರಿಯ ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್, ಆರ್‌ಪಿಎನ್ ಸಿಂಗ್, ಮುಂತಾದವರು ಕೂಡ ಯುಪಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬುದು ಕಿಶೋರ್ ಆಶಯವಾಗಿದೆ. ಕಾಂಗ್ರೆಸ್ ಮೈತ್ರಿ ಕೂಟದಲ್ಲಿ ಹಲವು ಇತರ ಪಕ್ಷಗಳಾದ ಜೆಡಿ(ಯು), ಆರ್‌ಜೆಡಿ, ಆರ್‌ಎಲ್ ಡಿ ಹಾಗೂ ಆಪ್ನಾ ದಲ್ ಸೇರಿ
ಅವರೆಲ್ಲಾ 100ಕ್ಕಿಂತ ಹೆಚ್ಚು ಸೀಟು ಪಡೆದಲ್ಲಿ ಕಾಂಗ್ರೆಸ್ ಈ ರಾಜ್ಯದಲ್ಲಿ ಅಧಿಕಾರ ಹಿಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆಯೆಂಬುದುಕಿಶೋರ್ ಅಭಿಮತವೆಂದು ಹೇಳಲಾಗುತ್ತಿದೆ.







