ಈಜಿಫ್ಟ್ ವಿಮಾನ ಹೈಜಾಕ್; ಪ್ರಯಾಣಿಕರ ಬಿಡುಗಡೆ

ಕೈರೋ, ಮಾ.29: ಅಲೆಗ್ಸಾಂಡ್ರಿಯಾದಿಂದ ಈಜಿಫ್ಟ್ ರಾಜಧಾನಿ ಕೈರೋಗೆ ತೆರಳುತ್ತಿದ್ದಈಜಿಪ್ಟ್ ಏರ್ ದೇಶೀಯ ವಿಮಾನವನ್ನು ದುಷ್ಕರ್ಮಿಗಳು ಹೈಜಾಕ್ ಮಾಡಿ ಸೈಪ್ರಸ್ ನ ಲಾರ್ನಾಕ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಅಲೆಂಗ್ಸಾಂಡ್ರಿಯಾದಿಂದ ಕೈರೋಗೆ ತೆರಳುತ್ತಿದ್ದ 81 ಮಂದಿ ಪ್ರಯಾಣಿಕರನ್ನು ಹೊತ್ತ ಈಜಿಪ್ಟ್ ಏರ್ ಎ320 ವಿಮಾನವನ್ನು ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ 8 ಗಂಟೆಗೆ ಹೈಜಾಕ್ ಮಾಡಿರುವ ದುಷ್ಕರ್ಮಿಗಳು ಸೈಪ್ರಸ್ ನ ಲಾರ್ನಾಕ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ.
ವಿಮಾನ ಟೇಕಾಫ್ ಆದ ಒಂದು ಗಂಟೆಯೊಳಗೆ ದುಷ್ಕರ್ಮಿಗಳು ವಿಮಾನವನ್ನು ಹೈಜಾಕ್ ಮಾಡಿದ್ದು, ಲಾರ್ನಾಕ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ.ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರನ್ನು ಬಿಡುಗಡೆಗೊಳಿಸಿರುವ ಅಪಹರಣಕಾರರು ಸಿಬ್ಬಂದಿ ಹಾಗೂ ಐವರು ವಿದೇಶಿಯರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ.
ವಿಮಾನತ್ತ ಪೊಲೀಸರು ಬಾರದಂತೆ ಹೈಜಾಕರ್ ಷರತ್ತು ವಿಧಿಸಿದ್ದಾರೆ. ಪೊಲೀಸರು ವಿಮಾನದತ್ತ ಬಂದರೆ ವಿಮಾನ ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಅಪಹರಣಕಾರರಲ್ಲಿ ಬಾಂಬ್, ಶಸ್ತ್ರಾಸ್ತ್ರಗಳು ಇದೆಯೆಂದು ಹೇಳಲಾಗಿದೆ.
ಈಜಿಪ್ಟ್ ಮೂಲದ ಪ್ರಯಾಣಿಕರು ಹೈಜಾಕ್ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಈಜಿಫ್ಟ್ ನ ಇಬ್ರಾಹಿಂ ಸಮಾಹ ವಿಮಾನ ಅಪಹರಣದ ಸೂತ್ರದಾರ ಎಂದು ಹೇಳಲಾಗಿದೆ. ರಾಜಕೀಯ ಆಶ್ರಯದ ಬೇಡಿಕೆಯನ್ನು ಹೈಜಾಕರ್‌ಗಳು ಮುಂದಿಟ್ಟಿದ್ದಾರೆ.







