ಬೆಳ್ತಂಗಡಿ; ವೇಣೂರು, ಆರಂಬೋಡಿ ಗ್ರಾ. ಪಂ ಗಳಿಗೆ ಚುನಾವಣೆ ಘೋಷಣೆ
ಬೆಳ್ತಂಗಡಿ, ಮಾ. 29: ತಾಲೂಕಿನ ವೇಣೂರು ಹಾಗೂ ಆರಂಬೋಡಿ ಗ್ರಾಮ ಪಂಚಾಯತ್ ಗಳಿಗೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ ನಾಲ್ಕು ಸ್ಥಾನಗಳಿಗೆ ಚುನಾವಣಾ ದಿನಾಂಕ ನಿಗಧಿ ಪಡಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಎಪ್ರಿಲ್ 4 ರಂದು ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಎಪ್ರಿಲ್ 17 ರಂದು ಚುನಾವಣೆ ನಡೆಯಲಿದೆ. ಎ. 7 ರ ವರೆಗೆ ನಾಮ ಪತ್ರ ಸಲ್ಲಿಕೆಗೆ ಅವಕಾಶವಿದ್ದು ಎ.9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ನಾಮಪತ್ರ ಹಿಂಪಡೆಯಲು ಎ. 11 ಕೊನೆಯ ದಿನವಾಗಿದೆ. ಮತಗಳ ಎಣಿಕೆ ಕಾರ್ಯ ಎ 20 ರಂದು ನಡೆಯಲಿದೆ. ತಾಲೂಕಿನ ವೇಣೂರು ಗ್ರಾಮ ಪಂಚಾಯತಿನ 24 ಸ್ಥಾನಗಳಿಗೆ ಹಾಗೂ ಆರಂಬೋಡಿ ಗ್ರಾಮ ಪಂಚಾಯತಿನ 12 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಲ್ಲದೆ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ತಾಲೂಕಿನ ಲಾಯಿಲ, ಚಾರ್ಮಾಡಿ, ಕಲ್ಮಂಜ, ಕಣಿಯೂರು ಗ್ರಾಮ ಪಂಚಾಯತುಗಳ ತಲಾ ಒಂದೊಂದು ಸ್ಥಾನಗಳಿಗೂ ಇದರೊಂದಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
Next Story





