ಮುಲ್ಕಿ: ‘ಅಷ್ಟಬಂದ ಬ್ರಹ್ಮಕಲಶಾಭಿಷೇಕ’ದ ಆಮಂತ್ರಣ ಪತ್ರ ಬಿಡುಗಡೆ

ಮುಲ್ಕಿ, ಮಾ.29: ಇಲ್ಲಿಗೆ ಸಮೀಪದ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಮೇ 4 ರಿಂದ 9ರವರೆಗೆ ‘ಅಷ್ಟಬಂದ ಬ್ರಹ್ಮಕಲಶಾಭಿಷೇಕ’ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಈ ಸಂದರ್ಭ ದೇವಳದ ತಂತ್ರಿಗಳಾದ ವೇದವ್ಯಾಸ ತಂತ್ರಿ, ಆಡಳಿತಾಧಿಕಾರಿ ವಾಣಿ ಆಳ್ವ, ಅರ್ಚಕ ಪುರುಷೋತ್ತಮ ಭಟ್, ಸಿಬ್ಬಂದಿ ಬಾಲಕೃಷ್ಣ ಕಾಮತ್, ವಿಶ್ವನಾಥ ರಾವ್, ಅತಿಕಾರಿಬೆಟ್ಟು ಗ್ರಾ.ಪಂ. ಉಪಾದ್ಯಕ್ಷ ಕಿಶೋರ್ ಶೆಟ್ಟಿ, ಸೀತಾರಾಮ ಭಟ್, ಉದ್ಯಮಿ ಜಯಕರ ಶೆಟ್ಟಿ,ಶಂಕರ ಶೆಟ್ಟಿ ಶಿಮಂತೂರು, ಆದಿಜನಾರ್ದನ ಯುವಕ ಮಂಡಲ ಶಿಮಂತೂರು ಇದರ ಸದಸ್ಯರು ಉಪಸ್ಥಿತರಿದ್ದರು.
Next Story





