ಸಾಲದ ಬಾಧೆ: ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
ಮುಂಡಗೋಡ, ಮಾ.29: ರೈತ ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಟ್ಟಣಗಿ ಗ್ರಾಮದಲ್ಲಿ ನಡೆದಿದೆ.
ಭಾಗವ್ವ ರಾಮಣ್ಣ ಧನೋಜಿ(58) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಸಾಲವನ್ನುತುಂಬುವಂತೆ ಮನೆಗೆ ನೋಟಿಸ್ ಬಂದಿದ್ದು ಪತಿ ಮಾಡಿದ ಸಾಲವನ್ನುತುಂಬಲು ಆಗುವುದಿಲ್ಲ ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪತಿ ರೈತ ರಾಮಣ್ಣ ಧನೋಜಿ ಅಟ್ಟಗಿ ಗ್ರಾಮದ ಗದ್ದೆಗೆ ಕಾತೂರ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸಾಲ ಮಾಡಿದ್ದರು. ಮಳೆ ಸರಿಯಾಗಿ ಬಾರದೆ ಇರುವುದರಿಂದ ಬೆಳೆ ಇಲ್ಲದೆ ಸಾಲವನ್ನು ಮರುಪಾವತಿ ಮಾಡದೇ ಬಂದಿದ್ದು ಈ ನಡುವೆ ರಾಮಣ್ಣ ಸಾಲದ ಕುರಿತು ಚಿಂತಿಸಿದ್ದರಿಂದ ಆರೋಗ್ಯ ಏರುಪೇರಾಗಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದಿದ್ದು, ಸಾಲ ಮರು ಪಾವತಿಸಲಾಗದೆ ನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





