ಮುಂಬೈಸ್ಫೋಟದಲ್ಲಿ ಮಾಜಿ ಸಿಮಿ ನಾಯಕ ಸಾಕಿಬ್ ನಾಚ್ಚನ್ ತಪ್ಪಿತಸ್ಥ: ವಿಶೇಷ ಪೋಟ ಕೋರ್ಟು

ಮುಂಬೈ, ಮಾರ್ಚ್.29:2002 ಮತ್ತು 2003ರಲ್ಲಿ ನಡೆದಿದ್ದ ಮೂರು ಸ್ಫೋಟ ಪ್ರಕರಣಗಳ ಸಿಮಿಯ ಮಾಜಿ ಪ್ರಧಾನ ಕಾರ್ಯದರ್ಶಿ ಸಾಕಿಬ್ ನಾಚ್ಚನ್ ಸಹಿತ ಹತ್ತು ಮಂದಿ ಅಪರಾಧಿಗಳೆಂದು ವಿಶೇಷ ಪೋಟ ನ್ಯಾಯಾಲಯ ತೀರ್ಪು ನೀಡಿದೆ ಎಂದು ವರದಿಯಾಗಿದೆ. ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಮೂವರನ್ನು ಬಿಡುಗಡೆಗೊಳಿಸಿದೆ. ಶಿಕ್ಷೆಯ ಪ್ರಮಾಣ ಬುಧವಾರ ಪ್ರಕಟಿಸಲಾಗುವುದು. ಸಿಮಿಯ ಮಾಜಿ ಕಾರ್ಯಕರ್ತರಾದ ಅದ್ನಾನ್ ಮುಲ್ಲಾ, ಹಾರೂನ್ ಲೊಹರ್, ನದೀಂ ಪಲೋಬ ಎಂಬವರನ್ನು ಆರೋಪ ಮುಕ್ತಗೊಳಿಸಲಾಗಿದೆ. 2002 ಡಿಸೆಂಬರ್ ಆರಕ್ಕೆ ಮುಂಬೈ ಸೆಂಟ್ರಲ್ ರೈಲ್ವೆ ಸ್ಟೇಶನ್‌ನ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ನಲ್ಲಿ 2003 ಜನವರಿಗೆ 27ರಂದು ವಿಲೆ ಪಾರ್ಲೆ ರೈಲ್ವೆ ಸ್ಟೇಶನ್‌ನ ಹೊರಗೆ ಮತ್ತು 2003 ಮಾರ್ಚ್ 13ರಂದು ಮುಳುಂಡ್ ರೈಲ್ವೆ ನಿಲ್ದಾನಕ್ಕೆ ಬಂದಿದ್ದ ಸಿಎಸ್‌ಟಿ ಕರ್ಜತ್ ಇಲಕ್ಟ್ರಿಕ್ ಟ್ರೈನ್‌ನ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿಯೂ ಸ್ಫೋಟಗಳು ನಡೆದಿದ್ದವು. ಇದು ಸಿಮಿ ಮತ್ತು ಪಾಕ್‌ನ ಲಷ್ಕರೆ ತಯ್ಯಿಬ ಸೇರಿ ನಡೆಸಿದ ಸ್ಫೋಟಗಳೆಂದು ಪೊಲೀಸರು ಆರೋಪ ಹೊರಿಸಿದ್ದರು. ಸಾಕಿಬ್ ನಾಚ್ಚನ್ ಮತ್ತು ಪಾಕ್ ಪ್ರಜೆ ಫೈಸಲ್ ಖಾನ್ ಸ್ಫೋಟವನ್ನು ಯೋಜಿಸಿದ್ದರು ಮತ್ತು 25 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿ ಐವರು ಮೃತರಾಗಿದ್ದರು. ಏಳು ಮಂದಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
ಸ್ಫೋಟಗಳು ನಡೆಸಲು ಮತ್ತಿತರ ಕಾರಣಕ್ಕಾಗಿ ಜನರನ್ನು ಸೇರಿಸಿದ್ದು ಆಯುಧ, ಸ್ಫೋಟಕ ವಸ್ತುಗಳನ್ನು ತಲುಪಿಸಿದ್ದು ಸಕೀಬ್ ನಚ್ಚಾನ್ ಎಂದು ಪ್ರಾಸಿಕ್ಯೂಶನ್ ವಾದಿಸಿತ್ತು. ನಾಪತ್ತೆಯಾದ ಆರೋಪಿಯೊಬ್ಬನೊಂದಿಗೆ ಡಾ. ವಾಹಿದ್ ಅನ್ಸಾರಿ ಬಾಂಬು ತಯಾರಿಸಿದ್ದರೆಂದು ಪ್ರಾಶಿಕ್ಯೂಶನ್ ವಾದಿಸಿದ್ದು ಇದನ್ನು ಕೋರ್ಟು ಅನುಮೋದಿಸಿದೆ. ಜನಾಬ್ ಎಂದು ಕರೆಯುತ್ತಿದ್ದ ನಾಪತ್ತೆಯಾಗಿರುವ ವ್ಯಕ್ತಿಯೊಂದಿಗೆ ಮುಝಮ್ಮಿಲ್ ಅನ್ಸಾರಿ ಬಾಂಬುಗಳನ್ನಿರಿಸಿದ್ದೆಂದು ಕೋರ್ಟು ನಿರ್ಧಾರಕ್ಕೆ ಬಂದಿದೆ. ಸಾಕಿಬ್ ನಾಚ್ಚನ್ ಸಹಿತ ಜಾಮೀನು ಪಡೆದಿದ್ದ ಆರೋಪಿಗಳು ಕೋರ್ಟು ತೀರ್ಪಿನೊಂದಿಗೆ ಶರಣಾಗಬೇಕಾಗಿದೆ ಎಂದು ವರದಿಯಾಗಿದೆ.







