ಉಳ್ಳಾಲ: ಕೇರಳ ಮೂಲದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಪಂಡಿತಹೌಸ್ ಸಮೀಪದ ಶಿವಾಜಿ ನಗರದ ನಿವಾಸಿ ಮೋಹನ್ ಪಿಳೈ(47) ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ ಸೋಮವಾರ ನಡೆದಿದೆ.
ಮೂಲತ ಕೇರಳ ಮೂಲದ ಇವರು ಹಲವು ವರ್ಷಗಳಿಂದ ಶಿವಾಜಿ ನಗರದಲ್ಲಿ ಕುಟುಂಬ ಸಮೇತರಾಗಿ ವಾಸಿಸುತ್ತಿದ್ದರು. ಕೂಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೈದಿರುವ ಬಗ್ಗೆ ಸಂಶಯಿಸಲಾಗಿದೆ. ಇವರು ಪತ್ನಿ ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





