ಉಳ್ಳಾಲ: ದುಷ್ಕರ್ಮಿಗಳಿಂದ ಮನೆಗೆ ಕಲ್ಲೆಸೆದು ಹಾನಿ

ಉಳ್ಳಾಲ: ಪೇಪರ್ ಏಜೆಂಟ್ ಪವಿತ್ರ ಕುಮಾರ್ ಗಟ್ಟಿ ಎಂಬವರ ಮನೆಗೆ ದುಷ್ಕರ್ಮಿಗಳು ಕಲ್ಲೆಸೆದು ಕಿಟಕಿ ಗಾಜು ಹಾನಿಗೈದಿರುವ ಘಟನೆ ಪಂಡಿತ್ ಹೌಸ್ ಸಮೀಪ ಸೋಮವಾರ ತಡರಾತ್ರಿ ನಡೆದಿದೆ.
ಸೋಮವಾರ ತಡರಾತ್ರಿ 12.00ಸುಮಾರಿಗೆ ದುಷ್ಕರ್ಮಿಗಳು ಕಲ್ಲೆಸಿದ್ದಾರೆ. ಮನೆಮಂದಿ ಮಲಗಿದ್ದ ಸಂದರ್ಭ ಘಟನೆ ನಡೆದಿದೆ. ಬೆಳಿಗ್ಗೆ ಕಲಸಕ್ಕೆ ತೆರಳುವ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





