ಮೂಡುಬಿದಿರೆ : ಸ್ವಚ್ಛತೆಯಲ್ಲಿ ಮೂಡುಬಿದಿರೆ ಸಿವಿಲ್ ಕೋರ್ಟ್ ಪ್ರಥಮ, ಪುರಸಭೆಗೆ ದ್ವಿತೀಯ ಸ್ಥಾನ

ಮೂಡುಬಿದಿರೆ : ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಸರಕಾರಿ ಕಛೇರಿ ಮತ್ತು ಕಟ್ಟಡಗಳಿಗೆ ಮೂಡುಬಿದಿರೆ ಪುರಸಭೆಯು ನಡೆಸಿದ ಮೌಲ್ಯ ಮಾಪನದಲ್ಲಿ ಮೂಡುಬಿದಿರೆ ಸಿವಿಲ್ ಕೋರ್ಟ್ ಪ್ರಥಮ ಹಾಗೂ ಪುರಸಭೆಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಸಮುದಾಯ ಆರೋಗ್ಯ ಕೇಂದ್ರ 3ನೇ ಸ್ಥಾನ, ಉಪ ಖಜಾನೆ-4ನೇ, ಬಿಎಸ್‌ಎನ್‌ಎಲ್, ಅಂಚೆ ಕಛೇರಿ-5ನೇ ಸ್ಥಾನ, ಅರಣ್ಯ ಇಲಾಖೆ-6ನೇ, ಶಿಕ್ಷಣ ಇಲಾಖೆ-7ನೇ, ತಹಶೀಲ್ದಾರ್ ಕಛೇರಿ, ಪೊಲೀಸ್ ಠಾಣೆ-8ನೇ ಸ್ಥಾನ ಹಾಗೂ ಮೂಡುಬಿದಿರೆ ಅಗ್ನಿಶಾಮಕ ಹಳೆ ಕಟ್ಟಡಕ್ಕೆ 9 ನೇ ಸ್ಥಾನ ಲಭಿಸಿದೆ. ಕಛೇರಿಗಳ ಒಳಗೆ ಮತ್ತು ಹೊರಗೆ ಕಸ ವಿಲೇವಾರಿ, ಸಾರ್ವಜನಿಕರಿಗೆ ಉಪಯೋಗವಾಗುವಂತೆ ನೀರಿನ ವ್ಯವಸ್ಥೆ, ನೂತನ ಮಾದರಿಯ ನಳ್ಳಿ ವ್ಯವಸ್ಥೆ, ಶೌಚಾಲಯದಲ್ಲಿ ನೂತನ ಮಾದರಿಯ ವ್ಯವಸ್ಥೆ ಹಾಗೂ ಕಛೇರಿಯ ಆವರಣದಲ್ಲಿರುವ ನಿರುಪಯುಕ್ತ ವಸ್ತುಗಳ ವಿಲೇವಾರಿ ಬಗ್ಗೆ ಮೌಲ್ಯ ಮಾಪನದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿತ್ತು.
Next Story





