ಕೊಣಾಜೆ : ಕಂಗೊಳಿಸುತ್ತಿರುವ ಮಂಗಳಗಂಗೋತ್ರಿ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ 34ನೇ ಘಟಿಕೋತ್ಸವವು ಬುಧವಾರ ನಡೆಯಲಿರುವ ಸಲುವಾಗಿ ಮಂಗಳೂರು ವಿವಿಯ ಮಂಗಳಗಂಗೋತ್ರಿ ಕ್ಯಾಂಪಸ್ ವಿದ್ಯುತ್ ದೀಪದ ಅಲಂಕಾರದೊಂದಿಗೆ ಶೃಂಗಾರಗೊಂಡು ಆಕರ್ಷಿಸುತ್ತಿದೆ. ಮಂಗಳೂರು ವಿವಿಯ ಮುಖ್ಯ ದ್ವಾರ ಸೇರಿದಂತೆ ವಿವಿಯ ಪ್ರೊ.ಶೇಖ್ ಆಲಿ ದ್ವಿಪಥ ರಸ್ತೆಯ ಎರಡೂ ಬದಿಗಳಲ್ಲೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅಲ್ಲದೆ ನಡುವೆ ಇರುವ ಮರಗಿಡಗಳೂ ಹಚ್ಚಹಸುರಿನ ಬಣ್ಣದೊಂದಿಗೆ ಕಂಗೊಳಿಸುತ್ತಿವೆ. ಪ್ರಮುಖವಾಗಿ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣ ವಿವಿಧ ಬಣ್ಣಗಳ ವಿದ್ಯುತ್ ದೀಪಗಳಿಂದ ಶೃಂಗರಿಸಲ್ಪಟ್ಟು ಜನರ ಆಕರ್ಷಣೆಯ ಕೇಂದ್ರವಾಗಿದೆ.
Next Story





