4.63 ಕೋಟಿ ರೂ. ಉಳಿತಾಯ ಬಜೆಟ್
ದಾವಣಗೆರೆ ಮಹಾನಗರ ಪಾಲಿಕೆ

ದಾವಣಗೆರೆ, ಮಾ. 29: ಮಹಾನಗರ ಪಾಲಿಕೆ 2016-17ನೆ ಸಾಲಿನ 4.63 ಕೋಟಿ ರೂ. ಉಳಿತಾಯ ಬಜೆಟ್‌ನ್ನು ಮಂಡಿಸಿತು.
ನಗರದ ಹೊರವಲಯದ ಧೋಬಿಘಾಟ್ ಬಳಿಯಿರುವ ಪಂಪ್‌ಹೌಸ್ ಬಳಿ ಪಾಲಿಕೆಯ ಮೇಯರ್ ಎಚ್.ಬಿ. ಗೋಣೆಪ್ಪ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ತೆರಿಗೆ ಹಣಕಾಸು, ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಗುರುರಾಜ್ ಮಿಗತೆ ಬಜೆಟ್ ಮಂಡಿಸಿದರು.
2016-17ರಲ್ಲಿ ಒಟ್ಟು ಸ್ವೀಕೃತಿಯಾಗಲಿರುವ ರಾಜಸ್ವ ಸ್ವೀಕೃತಿಗಳು 1,66,31,47,778 ಆಗಿದ್ದು, ಬಂಡವಾಳ ಸ್ವೀಕೃತಿ ಗಳು 3,64,27, 23,000, ಅಸಾಮಾನ್ಯ ಜಮೆಯ ಮೊತ್ತ 52,68,54,500 ಸೇರಿದಂತೆ ಒಟ್ಟು 5,83,27,25,278 ಸ್ವೀಕೃತ ಗೊಳ್ಳಲಿದೆ. ಅದರಲ್ಲಿ ವೆಚ್ಚವಾಗಲಿರುವ ಅನುದಾನ ಇಂತಿದ್ದು, ರಾಜಸ್ವ ಪಾವತಿಗಾಗಿ 1,26,74,71,702, ಬಂಡವಾಳ ಪಾವತಿಗಾಗಿ 4,05,81,89,600 ಹಾಗೂ ಅಸಾಮಾನ್ಯ ಪಾವತಿಗಾಗಿ 54,78,74, 900 ಸೇರಿದಂತೆ ಒಟ್ಟು 6,87,35,36,201 ಪಾವತಿಗಾಗಿ ಮೀಸಲಿಡಲಾಗಿದೆ.
<ಮಂಡಕ್ಕಿ ಭಟ್ಟಿ ಅಭಿವೃದ್ಧಿಗೆ ಕ್ರಮ: ಅದೇ ರೀತಿ, ಮಂಡಕ್ಕಿ ಭಟ್ಟಿ ಪ್ರದೇಶವನ್ನು ಮರು ಅಭಿವೃದ್ಧಿ ಮಾಡುವ ಕುರಿತಂತೆ ಒಟ್ಟು 35 ಕೋಟಿ ರೂ. ಮೀಸಲಾಗಿರಿಸಿದ್ದು, ವಾಣಿಜ್ಯ ಪ್ರದೇಶದ ಅಭಿವೃದ್ಧಿಗಾಗಿ 55 ಕೋಟಿ ರೂ. ಅನುದಾನ, ಖಾಸಗಿ ಬಸ್ ನಿಲ್ದಾಣ (ಪಿಬಿ ರಸ್ತೆ, ಜಗಳೂರು ರಸ್ತೆ) ಅಭಿವೃದ್ಧಿಗೆ ಒಟ್ಟು 25 ಕೋಟಿ ರೂ. ಮೀಸಲಿಟ್ಟಿದೆ.
ವಾಣಿಜ್ಯ ಸಂಕೀರ್ಣ ಮತ್ತು ವಾಹನ ನಿಲುಗಡೆಯ ತಂಗುದಾಣ ನಿರ್ಮಾಣಕ್ಕಾಗಿ 25 ಕೋಟಿ ರೂ., ಸಾರಿಗೆಯ ಸುಧಾರಣೆಗಾಗಿ 5 ಕೋಟಿ ರೂ., ದಾವಣಗೆರೆ ನಗರದ ವೈಶಿಷ್ಟತೆಗಾಗಿ ಮತ್ತು ಸಾಂಸ್ಕೃತಿಕ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 6.67 ಕೋಟಿ ರೂ., ಸೋಲಾರ್ ಇಂಧನಕ್ಕಾಗಿ 8.33 ಕೋಟಿ ರೂ. ಹಾಗೂ ಯುಟಿಲಿಟಿ ಕಾರಿಡಾರ್ ನಿರ್ಮಾಣಕ್ಕಾಗಿ 10 ಕೋಟಿ ರೂ. ತೆಗೆದಿರಿಸಲಾಗಿದ್ದು, ಘನತ್ಯಾಜ್ಯ ವಸ್ತು ನಿರ್ವಹಣೆಗೆ 30 ಕೋಟಿ ರೂ. ಮೀಸಲಿಟ್ಟಿದೆ ಎಂದರು.
<ಕೋಟಿ ರೂ. ಅನುದಾನ ನಿರೀಕ್ಷೆ: ಅಮೃತ್ ಯೋಜ ನೆಯಡಿ 2016-17ನೆ ಸಾಲಿಗೆ 6 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದ್ದು, ಈ ಪೈಕಿ ನಗರದ ವಾರ್ಡ್ ನಂ. 30ರಲ್ಲಿ ಶಾಮನೂರು ಗ್ರಾಮದ ರಿ.ಸಂ. 37ರಲ್ಲಿ ಉದ್ಯಾನವನ ಅಭಿವೃದ್ಧಿಗೆ 1 ಕೋಟಿ ರೂ. , ಹಳೆ ಪಿಬಿ ರಸ್ತೆಯಿಂದ ಚೌಡೇಶ್ವರಿ ನಗರದವರೆಗೆ ರಾಜಕಾಲುವೆಯ ಹೂಳು ತೆಗೆದು ಅಭಿವೃದ್ಧಿಗೆ 2.50 ಕೋಟಿ,ರೂ. ಕೃಷಿ ಕೇಂದ್ರದಿಂದ ಕುಂದವಾಡ ಕೆರೆಯವರೆಗೆ ರಾಜಕಾಲುವೆ ಯಲ್ಲಿರುವ ಹೂಳನ್ನು ತೆಗೆದು ಅಭಿವೃದ್ಧಿಗೆ 2.50 ಕೋಟಿ ರೂ., ಪಿಬಿ ರಸ್ತೆಯಿಂದ ಜಾಲಿನಗರದ ಮುಖಾಂತರ ಚೌಡೇಶ್ವರಿ ನಗರ ರಿಂಗ್ ರಸ್ತೆಯವರೆಗೆ ರಾಜ ಕಾಲುವೆ ಅಭಿವೃದ್ಧಿಗೆ 2.50 ಕೋಟಿ ರೂ., ಕೃಷಿ ಕೇಂದ್ರದಿಂದ ಬಾತಿ ಕೆರೆಯವರೆಗೆ ರಾಜಕಾಲುವೆ ಅಭಿವೃದ್ಧಿಗೆ 2.50 ಕೋಟಿ ರೂ., ಶಾಮನೂರು ಗ್ರಾಮದ ಉದ್ಯಾನವನ ಅಭಿವೃದ್ಧಿಗೆ 1 ಕೋಟಿ ರೂ. ನಿರೀಕ್ಷಿಸಿದೆ ಎಂದು ಮಾಹಿತಿ ನೀಡಿದರು.
<ಸ್ಮಶಾನ ಅಭಿವೃದ್ಧಿ: ರುದ್ರಭೂಮಿಯಲ್ಲಿ ವಿದ್ಯುತ್ ಚಿತಾ ಗಾರ ಅಳವಡಿಸಲು 50 ಲಕ್ಷ ರೂ. ಕಾಯ್ದಿರಿಸಲಾಗಿದೆ. ಪಾಮೇನಹಳ್ಳಿ ರಸ್ತೆಯ ಹಿಂದೂ, ಮುಸ್ಲಿಂ, ಕ್ರೈಸ್ತ ಸ್ಮಶಾನ ಅಭಿವೃದ್ಧಿಗೆ 30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸರಕಾರದಿಂದ ಬಿಡುಗಡೆಯಾಗುವ ಅನುದಾನ ರಾಜಸ್ವ ಕೃತಿಯಿಂದ 166.31 ಕೋಟಿ ರೂ. ಹಾಗೂ ಸ್ಮಾರ್ಟ್ ಸಿಟಿ ಅಮೃತ್ ಯೋಜನೆ ಎಸ್‌ಎಫ್‌ಸಿ, ಬಿಆರ್‌ಜಿಎಫ್, ಕೇಂದ್ರ ಹಣಕಾಸು ಆಯೋಗದ ಅನುದಾನ, ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಹಾಗೂ ಇತ್ಯಾದಿ ಯೋಜನೆಗಳಿಂದ ಬಂಡವಾಳ ಕೃತಿಯಾಗಿ 364,27 ಕೋಟಿ ರೂ. ಸೇರಿದಂತೆ ಒಟ್ಟು 530.38 ಕೋಟಿ ರೂ. ಅನುದಾನ ನಿಗದಿಗೊಳಿಸಲಾಗಿದೆ. ರಾಜಸ್ವ ವೆಚ್ಚ 126.75 ಕೋಟಿ ರೂ. ಬಂಡವಾಳ, 405.82 ಕೋಟಿ ರೂ. ಸೇರಿ ಒಟ್ಟು 532.57 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಒಟ್ಟಾರೆ 4.63 ಕೋಟಿ ರೂ. ಉಳಿತಾಯ ಬಜೆಟ್ ಇದಾಗಿದೆೆ ಎಂದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎನ್.ಪಿ. ಚಂದ್ರಶೇಖರ್,, ಅಲ್ತಾಫ್ ಹುಸೇನ್, ಲಕ್ಷ್ಮಿದೇವಿ ಬೀರಣ್ಣ, ಆಯುಕ್ತ ಬಿ.ಎಚ್. ನಾರಾಯಣಪ್ಪ, ಹಿರಿಯ ಸದಸ್ಯ ಶಿವನಹಳ್ಳಿ ರಮೇಶ್, ಸಿಪಿಐ ಸದಸ್ಯ ಆವರಗೆರೆ ಉಮೇಶ್, ಬಿಜೆಪಿ ಸದಸ್ಯ ಕುಮಾರ್, ಕಾಂಗ್ರೆಸ್‌ನ ದಿನೇಶ್ ಕೆ. ಶೆಟ್ಟಿ, ದಿನೇಶ್ ಶೆಟ್ಟಿ, ಹಾಲೇಶ್ ಹಾಗೂ ಪಾಲಿಕೆ ಎಲ್ಲಾ ಸದಸ್ಯರು ಭಾಗವಹಿಸಿದ್ದರು.







