Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಐಫೋನ್ ತೆರೆಯುವಲ್ಲಿ ಎಫ್‌ಬಿಐ ಸಫಲ

ಐಫೋನ್ ತೆರೆಯುವಲ್ಲಿ ಎಫ್‌ಬಿಐ ಸಫಲ

ಸ್ಯಾನ್‌ಬರ್ನಾಡಿನೊ ಶೂಟೌಟ್ ಪ್ರಕರಣ

ವಾರ್ತಾಭಾರತಿವಾರ್ತಾಭಾರತಿ29 March 2016 11:46 PM IST
share

 ಲಾಸ್‌ಏಂಜಲೀಸ್, ಮಾ.29: ಸ್ಯಾನ್‌ಬರ್ನಾಡಿನೊ ಶೂಟೌಟ್ ಪ್ರಕರಣದ ದಾಳಿಕೋರಲ್ಲೊಬ್ಬನು ಬಳಸಿದ ಐಫೋನನ್ನು, ಅನ್‌ಲಾಕ್ ಮಾಡುವಲ್ಲಿ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಸಫಲವಾಗಿದ್ದು, ಇದರೊಂದಿಗೆ ಆ್ಯಪಲ್ ಕಂಪೆನಿಯ ವಿರುದ್ಧ ಅಮೆರಿಕದ ಅಧಿಕಾರಿಗಳು ನಡೆಸಿದ ಕಾನೂನು ಸಮರಕ್ಕೆ ಅಂತಿಮ ತೆರೆಬಿದ್ದಿದೆ. ತನ್ನ ಗ್ರಾಹಕರ ಡಿಜಿಟಲ್ ಭದ್ರತೆ ಹಾಗೂ ಖಾಸಗಿತನದ ಮೇಲೆ ದೂರಗಾಮಿ ಪರಿಣಾಮವುಂಟಾಗುವ ಸಾಧ್ಯತೆಯಿರುವುದರಿಂದ ಐಫೋನ್ ಅನ್‌ಲಾಕ್ ಮಾಡುವುದಕ್ಕೆ ಅಮೆರಿಕ ಸರಕಾರಕ್ಕೆ ನೆರವಾಗಲು ಆ್ಯಪಲ್ ಕಂಪೆನಿ ನಿರಾಕರಿಸಿತ್ತು.
ಈ ಸೂಕ್ಷ್ಮಸಂವೇದಿ ಪ್ರಕರಣದ ವಿಚಾರಣೆಯನ್ನು ಅಮೆರಿಕದ ಪ್ರಮುಖ ನ್ಯಾಯಾಲಯವೊಂದು ಈ ತಿಂಗಳ ಆರಂಭದಲ್ಲಿ ನಡೆಸಲಿತ್ತು. ಆದರೆ ಸ್ಯಾನ್‌ಬರ್ನಾಡಿನೊ ಹಂತಕರ ಐಫೋನ್ ಅನ್‌ಲಾಕ್‌ಮಾಡಲು ತನಗೆ ಆ್ಯಪಲ್ ಕಂಪೆನಿಯ ನೆರವಿನ ಅಗತ್ಯವಿಲ್ಲ , ಅದಕ್ಕಾಗಿ ತಾನು ಬೇರೆಯವರ ಸಹಾಯವನ್ನು ಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು. ಎಫ್‌ಬಿಐಗೆ, ಐಫೋನ್ ಆನ್‌ಲಾಕ್ ಮಾಡಲು ಯಾರು ನೆರವಾದರು ಹಾಗೂ ಆ ಉಪಕರಣದಲ್ಲಿ ಯಾವ ಮಾಹಿತಿಗಳು ಶೇಖರವಾಗಿವೆಯೆಂಬುದು ಇನ್ನೂ ಕೂಡಾ ಸ್ಪಷ್ಟವಾಗಿಲ್ಲ.ಆದರೆ ಐಫೋನ್ ಅನ್‌ಲಾಕ್‌ಗೆ ಎಫ್‌ಬಿಐ ಇಸ್ರೇಲ್‌ನ ಅಪರಾಧ ವಿಧಿವಿಜ್ಞಾನ ಕಂಪೆನಿಯೊಂದರ ನೆರವನ್ನು ಕೋರಿತ್ತೆಂದು ಕೆಲವು ಸುದ್ದಿಸಂಸ್ಥೆಗಳು ವರದಿ ಮಾಡಿದ್ದವು.
 ಐಫೋನ್ ಅನ್‌ಲಾಕ್‌ನಂತಹ ಪ್ರಕರಣಗಳನ್ನು ಎಫ್‌ಬಿಐ ನ್ಯಾಯಾಲಯದ ಮುಂದೆ ತರಬಾರದಿತ್ತು ಎಂದು ಹೇಳಿರುವ ಆ್ಯಪಲ್, ತನ್ನ ಉತ್ಪನ್ನಗಳ ಭದ್ರತೆಯನ್ನು ಹೆಚ್ಚಿಸುವುದನ್ನು ತಾನು ಮುಂದುವರಿಸುವುದಾಗಿ ಘೋಷಿಸಿದೆ.
  ಸ್ಯಾನ್‌ಬರ್ನಾಡಿನೊ ಶೂಟೌಟ್ ಪ್ರಕರಣದ ಹಂತಕ ಫಾರೂಕ್‌ನ ಐಫೋನ್‌ನಲ್ಲಿರುವ ದತ್ತಾಂಶಗಳನ್ನು ಪಡೆದುಕೊಳ್ಳುವಲ್ಲಿ ತಾನು ಯಶಸ್ವಿಯಾಗಿದ್ದು ತನಗೆ ಆ್ಯಪಲ್ ಕಂಪೆನಿಯ ನೆರವಿನ ಅಗತ್ಯವಿಲ್ಲವೆಂದು ಎಫ್‌ಬಿಐ ಪರ ನ್ಯಾಯವಾದಿಗಳು ತಿಳಿಸಿದ್ದಾರೆ.
  ಡಿಸೆಂಬರ್ 2ರಂದು ಕ್ಯಾಲಿಫೋರ್ನಿಯಾ ರಾಜ್ಯದ ಸಾನ್ ಬರ್ನಾಡಿನೊದಲ್ಲಿ ಫಾರೂಕ್ ಹಾಗೂ ಆತನ ಪತ್ನಿ ತಶ್‌ಫೀನ್ ಮಲಿಕ್ ಮನಬಂದಂತೆ ಗುಂಡುಹಾರಿಸಿ 14 ಮಂದಿಯನ್ನು ಹತ್ಯೆಗೈದಿದ್ದು, ಆನಂತರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದರು.

 ಮಾನವಹಕ್ಕು ಹೋರಾಟಗಾರರ ವಿರೋಧ

  ಐಫೋನ್ ಅನ್‌ಲಾಕ್ ಮಾಡಲು ನ್ಯಾಯಾಲಯದ ಮೆಟ್ಟಲೇರಿದ ಅಮೆರಿಕ ಸರಕಾದ ನಿರ್ಧಾರದ ವಿರುದ್ಧ ತಂತ್ರಜ್ಞಾನ ಕಂಪೆನಿಗಳು, ಭದ್ರತಾ ತಜ್ಞರು ಹಾಗೂ ಮಾನವಹಕ್ಕುಗಳ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಪ್ರಕರಣವು ಕೇವಲ ಒಂದು ಮೊಬೈಲ್ ಫೋನ್‌ಗೆ ಮಾತ್ರ ಸೀಮಿತವಾಗಿಲ್ಲ. ತಮ್ಮ ಉತ್ಪನ್ನಗಳಿಂದ ಮಾಹಿತಿಯನ್ನು ಗೌಪ್ಯವಾಗಿಪಡೆದುಕೊಳ್ಳಲು ಮೊಬೈಲ್ ಕಂಪೆನಿಗಳಿಗೆ ಪ್ರೇರಣೆಯನ್ನು ನೀಡಲಿದೆಯೆಂದು ಅವರು ಆಪಾದಿಸಿದ್ದಾರೆ
 ಈ ಪ್ರಕರಣದಲ್ಲಿ ಅಮೆರಿಕ ಸರಕಾರಕ್ಕೆ ಬೇರೊಂದು ದುರುದ್ದೇಶವಿರುವುದಾಗಿ, ಆ್ಯಪಲ್ ಕಂಪೆನಿಯ ಬೆಂಬಲಕ್ಕೆ ನಿಂತಿರುವ ‘ಫೈಟ್ ಫಾರ್ ದಿ ಫ್ಯೂಚರ್’ ಎಂಬ ಸರಕಾರೇತರ ಸಂಸ್ಥೆಯ ಪ್ರಚಾರ ನಿರ್ದೇಶಕ ಇವಾನ್ ಗ್ರೀರ್ ತಿಳಿಸಿದ್ದಾರೆ. ಈ ಪ್ರಕರಣದಿಂದಾಗಿ ಎಫ್‌ಬಿಐನ ವಿಶ್ವಾಸರ್ಹತೆ ತೀರಾ ಕೆಳಮಟ್ಟಕ್ಕೆ ಕುಸಿದಿದೆಯೆಂದು ಅವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X