ಮುಲ್ಕಿ:ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ 6 ಕೊಠಡಿಗಳ ಉದ್ಘಾಟನೆ
.jpg)
ಮುಲ್ಕಿ, ಮಾ.30: ಇಲ್ಲಿನ ಕೆ.ಎಸ್.ರಾವ್ ನಗರದ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 6 ಕೊಠಡಿಗಳನ್ನು ಮುಲ್ಕಿ ಮೂಡಬಿದಿರೆ ಕ್ಷೇತ್ರ ಶಾಸಕ ಅಭಯ ಚಂದ್ರ ಜೈನ್ ಅವರ ವಿಶೇಷ ಅನುದಾನದ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾದ ಕೊಠಡಿಗಳನ್ನು ಶಾಸಕ, ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಬಿ.ಎಂ. ಆಸೀಪ್, ಬಶೀರ್, ಪುತ್ತುಬಾವ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶರೀಫ್ ಕೆ.ಎಚ್, ನವೀನ್ ಪುತ್ರನ್, ಎಂ.ಎಂ. ಬಾವಾ ಮೊದಲಾದವರು ಉಪಸ್ಥಿತರಿದ್ದರು.
Next Story





