ಅಭಿಮಾನಿಗಳಿಂದ ರಜನಿ ಕಟೌಟ್‌ಗೆ ಕ್ಷೀರಾಭಿಷೇಕ : ನಟನಿಗೆ ಕೋರ್ಟ್ ನೋಟಿಸ್

ನವದೆಹಲಿ : ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರಗಳ ಬಿಡುಗಡೆ ಸಂದರ್ಭ ಅವರ ಅಭಿಮಾನಿಗಳು ಅವರ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿ ಸಾವಿರಾರು ಲೀಟರ್‌ಗಳಷ್ಟು ಹಾಲನ್ನು ವ್ಯರ್ಥ ಮಾಡಿದ ಹಿನ್ನೆಲೆಯಲ್ಲಿ ನಟ ಹಾಗೂ ಅವರ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ನಟ ಸ್ವತಹ ಮುಂದೆ ಬಂದು ಅಭಿಮಾನಿಗಳು ಈ ರೀತಿ ಹಾಲನ್ನು ವ್ಯರ್ಥ ಮಾಡದಂತೆ ಅವರಿಗೆ ತಿಳಿ ಹೇಳಬೇಕು ಎಂದು ದೂರುದಾರ ಡಾ. ಐಎಂಎಸ್ ಮಣಿವಣ್ಣ ಹೇಳಿದ್ದಾರಲ್ಲದೆ ಕೋರ್ಟ್ ಈ ನಿಟ್ಟಿನಲ್ಲಿ ನಟ ಹಾಗೂ ಅವರ ಅಭಿಮಾನಿಗಳಿಗೆ ಆದೇಶ ನೀಡಬೇಕೆಂದೂ ವಿನಂತಿಸಿದ್ದಾರೆ.
ನಟನಿಗೆ ಕೋರ್ಟ್ ನೋಟೀಸೊಂದು ಜಾರಿಯಾಗಿದ್ದು ಅವರು ಇದಕ್ಕೆ ಪ್ರತಿಕ್ರಿಯಿಸಬೇಕಾಗಿದೆ. ಪ್ರಕರಣ ಮಾರ್ಚ್ 26ರಂದು ದಾಖಲಾಗಿದ್ದು ಮುಂದಿನ ವಿಚಾರಣೆ ಎಪ್ರಿಲ್ 11ರಂದು ಜರುಗಲಿದೆ.
ಇತ್ತೀಚಿಗಿನ ದಿನಗಳಲ್ಲಿ ರಜನಿಕಾಂತ್ ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕುತ್ತಿದ್ದು ಅವರ ಚಿತ್ರ ಲಿಂಗಾ ಕೂಡ ಆರಂಭದಿಂದಲೂ ವಿವಾದಕ್ಕೆ ತುತ್ತಾಗಿತ್ತು. ಚಿತ್ರ ಯಶಸ್ಸು ಪಡೆದಿರದ ಹಿನ್ನೆಲೆಯಲ್ಲಿ ಅದರ ವಿತರಕರು ತಮ್ಮ ನಷ್ಟವನ್ನು ನಟ ಭರಿಸಬೇಕೆಂಬ ಬೇಡಿಕೆಯನ್ನೂ ಇಟ್ಟಿದ್ದರು. ಮೇಲಾಗಿ ಲಿಂಗಾ ಚಿತ್ರದ ಕಥೆ ತಮ್ಮದೆಂದು ಸಕ್ತಿವೇಲ್ ಹಾಗೂ ಚಿತ್ರ ನಿರ್ಮಾತೃ ಕೆ ಆರ್ ರವಿ ರತಿನಂ ಎಂಬವರು ಹೇಳಿಕೊಂಡಿದ್ದರು.







