ಉಳ್ಳಾಲ: ಹೋಟೆಲ್ ಮತ್ತು ಬಾರ್‌ಗಳಿಗೆ ನಗರ ಸಭೆಯ ಅಧಿಕಾರಿಗಳಿಂದ ದಾಳಿ

ಉಳ್ಳಾಲ. ಮಾ, 30: ಉಳ್ಳಾಲ ನಗರಸಭೆ ವ್ಯಾಪ್ತಿಯಲಿರುವ ಹೋಟೆಲ್ ಮತ್ತು ಬಾರ್‌ಗಳಿಗೆ ನಗರ ಸಭೆಯ ಅಧಿಕಾರಿಗಳು ದಾಳಿ ನಡೆಸಿ ಎಚ್ಚರಿಕೆ ನೀಡಿದ ಘಟನೆ ಬುಧವಾರ ನಡೆದಿದೆ.
ಆರೋಗ್ಯ ಸಚಿವರ ನಿರ್ದೇಶನದಂತೆ ಈ ದಾಳಿ ಪ್ರಕ್ರಿಯೆಯನ್ನು ಕೈಗೊಂಡಿದ್ದೇವೆ.
ಆಹಾರತಯಾರಿಸುವ ಮತ್ತು ಪೂರೈಕೆ ಮಾಡುವ ಎಲ್ಲಾ ಉಪಾಹಾರ ಗೃಹಗಳು ಅಥವಾ ಹೊಟೇಲುಗಳು, ಜ್ಯೂಸ್ ಸೆಂಟರುಗಳಿಗೆ ದಾಳಿ ನಡೆಸಿ ಅಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಲಾಗುತ್ತದೆ. ಈ ಹಿಂದೊಮ್ಮೆ ಪರಿಶೀಲಿಸಲಾಗಿದ್ದು, ಇದೀಗ ಮತ್ತೆ ಈ ಕ್ರಮ ಕೈಗೊಳ್ಳಲಾಗಿದೆ. ಆಹಾರ ಕೇಂದ್ರಗಳ ಸ್ವಚ್ಛತೆಯಲ್ಲಿ ನ್ಯೂನತೆಗಳು ಕಂಡುಬಂದಲ್ಲಿ ಅಂತಹ ಕೇಂದ್ರಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು, ಮಾತ್ರವಲ್ಲಉಪಾಹಾರ ಮಂದಿರಗಳ ಪರವಾನಿಗೆಯನ್ನೇ ರದ್ದುಗೊಳಿಸಲಾಗುವುದು ಎಂದು ಹಿರಿಯಆರೋಗ್ಯ ನಿರೀಕ್ಷಕರಾದ ಜಯಶಂಕರ್ ಎಚ್ಚರಿಕೆ ನೀಡಿದ್ದಾರೆ.
ಉಪನೀಕ್ಷಕರಾದ ಸಾಜೀದ್, ರಾಜೇಶ್ ನಗರ ಸಭೆ ಸಿಬಂಧಿ ಶಿವಪ್ಪ ಅಂಗಾರೆ ಉಪಸ್ಥಿತರಿದರು.
Next Story





