ಟ್ವೆಂಟಿ-20 ವಿಶ್ವಕಪ್ :ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್‌ನ ಗೆಲುವಿಗೆ 154 ರನ್‌ಗಳ ಸವಾಲು

ಹೊಸದಿಲ್ಲಿ, ಮಾ.30: ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನ ಮೊದಲ ಸೆಮಿಪೈನಲ್ ಪಂದ್ಯದಲ್ಲಿ ಇಂದು ನ್ಯೂಝಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ8 ವಿಕೆಟ್ ನಷ್ಟದಲ್ಲಿ153ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲೆಂಡ್ ತಂಡ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್‌ರನ್ನು ಬೇಗನೆ ಕಳೆದುಕೊಂಡರೂ, ಎರಡನೆ ವಿಕೆಟ್‌ಗೆ ನಾಯಕ ಕೇನ್ ವಿಲಿಯಮ್ಸನ್ ಮತ್ತು ಮುನ್ರೊ 74 ರನ್ ಸೇರಿಸಿದರು.
10.3ನೆ ಓವರ್‌ನಲ್ಲಿ ವಿಲಿಯಮ್ಸನ್ 32 ರನ್ ಗಳಿಸಿ ಮೊಯಿನ್ ಅಲಿಗೆ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು.
ಮುನ್ರೊ 46 ರನ್(32ಎ, 7ಬೌ,1ಸಿ) ಗಳಿಸಿ ಔಟಾದರು. ಆಗ ತಂಡದ ಸ್ಕೋರ್ 13.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 107ಆಗಿತ್ತು. ಬಳಿಕ ತಂಡದ ಬ್ಯಾಟಿಂಗ್ ದುರ್ಬಲಗೊಂಡಿತು.
ಕೋರಿ ಆ್ಯಂಡರ್ಸನ್ ಹೋರಾಟದ ಮೂಲಕ 28 ರನ್ ಗಳಿಸಿದರು. ರಾಸ್ ಟೇಲರ್ 6 ರನ್, ಗ್ರಾಂಟ್ ಎಲಿಯಟ್ 4 ರನ್, ಲೂಕ್ ರೊಂಚಿ3ರನ್, ಸಾಂಟ್ನರ್ 7 ರನ್, ಮೆಕ್ಲೀನಘನ್ 1 ರನ್ ಗಳಿಸಿದರು.
Next Story





