ಕಾಸರಗೋಡು : ಮೇ 16 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗಿರುವ ಸಿಪಿ ಎಂ ಅಭ್ಯರ್ಥಿಗಳ ಹೆಸರು ಪ್ರಕಟ

ಕಾಸರಗೋಡು : ಮೇ 16 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗಿರುವ ಸಿಪಿ ಎಂ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ .
ಮಂಜೇಶ್ವರದಿಂದ ಸಿ . ಎಚ್ ಕುನ್ಚಂಬು, ಉದುಮದಿಂದ ಕೆ. ಕುನ್ಚಿರಾಮನ್ ಮತ್ತು ತ್ರಿಕ್ಕರಿಪುರದಿಂದ ರಾಜಗೋಪಾಲ್ ಕಣಕ್ಕಿಳಿಯಲಿದ್ದಾರೆ.
ಸಿ . ಎಚ್ ಕುನ್ಚಂಬು ಮೂರನೇ ಬಾರಿ ಕಣಕ್ಕಿಳಿಯುತ್ತಿದ್ದಾರೆ . 2006 ರಲ್ಲಿ ಮಂಜೇಶ್ವರ ಕ್ಷೇತ್ರದಿಂದ ಅಚ್ಚರಿಯ ಗೆಲುವು ಸಾಧಿಸಿದ್ದರು. ಇದರಿಂದ 20 ವರ್ಷಗಳ ಮುಸ್ಲಿಂ ಲೀಗ್ ಅಧಿಪತ್ಯಕ್ಕೆ ಅಂತ್ಯ ಹಾಡಿದ್ದರು.
ಆದರೆ 2011 ರಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಮತ್ತೆ ಈ ಕ್ಷೇತ್ರವನ್ನು ಗೆದ್ದಿತ್ತು . ಸಿ . ಎಚ್ ಕುನ್ಚಂಬು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಮೂರನೇ ಬಾರಿ ಕುನ್ಚಂಬು ರವರನ್ನು ಕಣಕ್ಕಿಳಿಸಲು ಪಕ್ಷವು ನಿರ್ಧರಿಸಿದೆ.
ಮುಸ್ಲಿಂ ಲೀಗ್ ನಿಂದ ಹಾಲಿ ಶಾಸಕ ಪಿ . ಬಿ ಅಬ್ದುಲ್ ರಜಾಕ್ ಮತ್ತು ಬಿ ಜೆ ಪಿ ಯಿಂದ ಕೆ . ಸುರೇಂದ್ರನ್ ಸ್ಪರ್ದಿಸುತ್ತಿದ್ದಾರೆ .
ಉದುಮದಿಂದ ಹಾಲಿ ಶಾಸಕ ಕೆ. ಕುನ್ಚಿರಾಮನ್ ರಿಗೆ ಎರಡನೇ ಭಾರೀ ಅವಕಾಶ ನೀಡಲಾಗಿದೆ. 2011 ರಲ್ಲಿ 11 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ತ್ರಿಕ್ಕರಿಪುರ ದಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಲಾಗಿದೆ. ಸಿ ಪಿ ಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ . ರಾಜಗೋಪಾಲನ್ ರನ್ನು ಕಣಕ್ಕಿಳಿಸಲಾಗಿದೆ.
ಹಾಲಿ ಶಾಸಕ ಕೆ . ಕುನ್ಚಿರಾಮನ್ ರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಎರಡು ಬಾರಿ ಆಯ್ಕೆಯಾದವರಿಗೆ ಮೂರನೇ ಬಾರಿ ಅವಕಾಶ ನೀಡದಿರಲು ಪಕ್ಷವು ತೀರ್ಮಾನಿಸಿದೆ.
ಕಾನ್ಚಾನ್ಗಾಡ್ ಸಿಪಿಐ ಮತ್ತು ಕಾಸರಗೋಡಿನಲ್ಲಿ ಐ ಎನ್ ಎಲ್ ಅಭ್ಯರ್ಥಿಗಳು ಸ್ಪರ್ದಿಸುವರು. ಕಾನ್ಚಂಗಾಡ್ ನಿಂದ ಹಾಲಿ ಶಾಸಕ ಇ. ಚಂದ್ರಶೇಖರನ್ ಸ್ಪರ್ಧಿಸುತ್ತಿದ್ದಾರೆ .
ಕಾಸರಗೋಡು ಕ್ಷೇತ್ರದ ಬಗ್ಗೆ ಇನ್ನೂ ಅಭ್ಯರ್ಥಿ ಆಯ್ಕೆ ಅಂತಿಮ ಗೊಂಡಿಲ್ಲ .
ಎಡರಂಗದ ಘಟಕ ಪಕ್ಷವಾದ ಸಿಪಿಎಂ ಮಂಜೇಶ್ವರ, ಉದುಮ , ತ್ರಿಕ್ಕರಿಪುರ , ಸಿಪಿಐ ಕಾನ್ಚಾನ್ಗಾಡ್ ಮತ್ತು ಐ ಎನ್ ಎಲ್ ಗೆ ಕಾಸರಗೋಡು ವಿಧಾನಸಭಾ ಕ್ಷೇತ್ರ ನೀಡಲಾಗಿದೆ .







