ರಾಷ್ಟ್ರಪತಿ ಹುದ್ದೆಗೆ ಅಮಿತಾಭ್ ಹೆಸರು ಸೂಚಿಸುವರೆ ಮೋದಿ ?

ಹೊಸದಿಲ್ಲಿ , ಮಾ. 30 : ಇದು ಒಂದೋ ಈ ವರ್ಷದ ಅತಿದೊಡ್ಡ ರಾಜಕೀಯ ಸುದ್ದಿ ಅಥವಾ ಬಹುದೊಡ್ಡ ರಾಜಕೀಯ ವದಂತಿ. ಖ್ಯಾತ ರಾಜಕಾರಣಿ ಅಮರ್ ಸಿಂಗ್ ಪ್ರಕಾರ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಭಾರತದ ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ ! ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಬಚ್ಚನ್ ಅವರ ಹೆಸರನ್ನು ದೇಶದ ಅತ್ಯುನ್ನತ ಹುದ್ದೆಗೆ ಸೂಚಿಸಲಿದ್ದಾರೆ ಎಂದು ನನಗೆ ಮಾಹಿತಿ ಸಿಕ್ಕಿದೆ ಎಂದು ಝೀ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಅಮರ್ ಸಿಂಗ್ ಹೇಳಿದ್ದಾರೆ. ಅಮರ್ ಸಿಂಗ್ ವರ್ಣರಂಜಿತ ರಾಜಕಾರಣಿ. ಅವರಿಗೆ ಎಲ್ಲ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಹಾಗೆ ಬಾಲಿವುಡ್ ನಲ್ಲೂ ಅವರಿಗೆ ಎಲ್ಲರೂ ಪರಿಚಿತರೇ. ಬಿಗ್ ಬಿ ಅವರನ್ನು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿ ಭೇಟಿ ಮಾಡಿಸಿದ್ದು ನಾನೇ ಎಂದೂ ಅಮರ್ ಹೇಳಿದ್ದಾರೆ.
ಅವರ ಈ "ರಾಷ್ಟ್ರಪತಿ" ಹೇಳಿಕೆ ಏನಾಗುತ್ತೆ ಎಂದು ಕಾಲವೇ ಹೇಳಬೇಕು.
Next Story





