ಉಪ್ಪಳ: ಪೊಯ್ಯತ್ತಬೈಲ್ ಜಮಾಅತ್ತ್ ಸಮಿತಿಗೆ ಚುಣಾವಣೆ ನಡೆಸಲು ವಕುಪ್ಪ್ ನ್ಯಾಯಲಯದಿಂದ ಆದೇಶ

ಉಪ್ಪಳ:ಇಲ್ಲಿನ ವರ್ಕಾಡಿ ಸಮೀಪದ ಪೋಯ್ಯತ್ತಬೈಲ್ ಜಮಾಅತ್ತ್ ನ ನೂತನ 2016-17 ವರ್ಷದ ಸಮಿತಿಗೆ ಚುನಾವಣೆ ನಡೆಸಲು ವಕುಪ್ಪ್ ಟ್ರುಬ್ಯೂನಲ್ ನ್ಯಾಯಲಯ ಆದೇಶ ನೀಡಿದೆ.ಈ ಹಿಂದೆ ಪೋಯ್ಯತ್ತಬೈಲ್ ಮಸೀದಿಯಲ್ಲಿ ಖಾಸಿ ಸಹಿತ ಹಲವು ವಿವಾದಗಳು ನಡೆದಿತ್ತು. ಇದೀಗ ಎರಡು ವಿಭಾಗಗಳ ನಡುವೆ ಜಮಾಅತ್ತ್ ಸಮಿತಿಗಿರುವ ನೂತನ ಕಮಿಟಿಯ ಆಯ್ಕೆಗೆ ಸಂಬಂಧಿಸಿ ವಾದಗಳು ನಡೆದಿದ್ದೂ ಇದೀಗ ವಾದವನ್ನು ಆಲಿಸಿದ ಬಳಿಕ ನ್ಯಾಯಲಯವು ಜಮಾಅತ್ತ್ ಸಮಿತಿಗಿರುವ ನೂತನ ಸದಸ್ಯರನ್ನು ರಹಸ್ಯ ಮತದಾನದ ಮೂಲಕ ಆಯ್ಕೆ ನಡೆಸಲು ಆದೇಶಿಸಿದೆ.ಇದೀಗ ಆಡಳಿತದಲ್ಲಿರುವ ಜಮಾಅತ್ತ್ ಸಮಿತಿ ಮಾರ್ಚ್ 31 ರಂದುಜನರಲ್ ಬೋಡಿ ಮೀಟಿಂಗನ್ನು ಕರೆಯಲು ತಿರ್ಮಾನಿಸಿತ್ತು.ಇದನ್ನು ರದ್ದುಗೊಳಿಸಿದ ನ್ಯಾಯಲಯವು ಎಪ್ರೀಲ್ 9 ರಂದು ಪ್ಯಾನೆಲ್ ರೂಪದಲ್ಲಿ ಚುನಾವಣೆ ನಡೆಸಲು ಆದೇಶ ನೀಡಿದೆ.ಇದೀಗ ಕೇವಲ ಎರಡು ಪ್ಯಾನಲ್‌ಗಳ ಮೂಲಕ ಒಟ್ಟು 50 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದೂ ಎರಡು ವಿಭಾಗಗಳಲ್ಲಿ 25 ಮಂದಿಯಂತೆ ಸ್ಪರ್ದಿಸುತ್ತಿದ್ದಾರೆ.ಒಟ್ಟು 580 ಮತದಾರರು ಈ ಜಮಾಅತ್ತಿನಲ್ಲಿ ಒಳಗೊಂಡಿದ್ದೂ ಎರಡು ವಿಬಾಗಗಳಿಗೂ ಸಮ ಬಲದ ಪೈಪೋಟಿ ನಡೆಯಲಿದ್ದೂ,73 ಮಂದಿ ತಟಸ್ಥನಿಲುವನ್ನು ಹೊಂದಿದ್ದೂ ಇವರ ನಿಲುವು ಇಲ್ಲಿನ ಸಮಿತಿಯ ಆಯ್ಕೆಯಲ್ಲಿ ಪ್ರಧಾನ ಪಾತ್ರ ವಹಿಸಲಿದೆ.ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಲ್ಲಿ ಚುನಾವಣೆ ನಡೆಯುತ್ತಿದ್ದೂ,ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಖಾಸಿ ಅಥವಾ ಸಂಘಟನೆ ಎಂಬುದರ ಬಗ್ಗೆ ಯಾವುದೇ ವಿವಾದಗಳು ಹುಟ್ಟಿಕೊಂಡಿರಲಿಲ್ಲ.ಕಳೆದ ಎರಡು ವರ್ಷಗಳಿಂದ ಇಲಿ ್ಲಈ ರೀತಿಯ ವಿವಾದಗಳು ಹುಟ್ಟಿಕೊಂಡಿದ್ದೂ ಇದು ಬಾರೀ ಚರ್ಚೆಗೂ ಕಾರಣವಾಗಿದೆ.ಇದೀಗ ಚುನಾವಣ ಅಧಿಕಾರಿಯಾಗಿ ನ್ಯಾಯಲಯ ಆಂಟನಿ ಎಂಬವರನ್ನು ನೇಮಕಗೊಳಿಸಿದೆ ಹಾಗೂ ಚುನಾವಣೆಯ ವೇಳೆ ನಿಯಂತ್ರವನ್ನು ವಹಿಸಲು ಕುಂಬಳೆ ಸಿಐ ಯವರಿಗೆ ನ್ಯಾಯಲಯ ಆದೇಶಿಸಿದೆ.ಎಪ್ರೀಲ್ ತಿಂಗಳ 9 ರಂದು ಬೆಳಗ್ಗೆ 10 ರಿಂದ ಸಂಜೆ 3 ಗಂಟೆಯವರೆಗೆ ಮತದಾನ ನಡೆಯಲಿದೆ.





