ಮೂಡುಬಿದಿರೆ: ಮಾರಿಗುಡಿಯಲ್ಲಿ ಶ್ರೀದೇವಿ ಪ್ರತಿಷ್ಠೆ
.jpg)
ಮೂಡುಬಿದಿರೆ: ಇಲ್ಲಿನ ಪುರಾತನ ಶ್ರೀ ಆದಿಶಕ್ತಿ ಮಹಾದೇವಿ ನವೀಕೃತ ಶಿಲಾಮಯ ದೇವಸ್ಥಾನ(ಮಾರಿಗುಡಿ) ಶ್ರೀದೇವಿ ಪ್ರತಿಷ್ಠೆ ಮಂಗಳವಾರ ವೈಧಿಕ ವಿಧಿವಿಧಾನಗಳ ಮೂಲಕ ನೆರವೇರಿತು.
ಈ ಪ್ರಯುಕ್ತ ಸೋಮವಾರ ಶಾಂತಿ ಹೋಮ, ಬಿಂಬಶುದ್ಧಿ, ಮೃತ್ಯುಂಜಯ ಯಾಗ , ಶಕ್ತಿ ಮಂಡಲ ಪೂಜೆ, ಅಸ್ತ್ರ ಹೋಮ, ಪರಿವಾರ ದೇವಗಳ ಪ್ರತಿಷ್ಠೆ, ಪರ್ವಪೂಜೆ, ಬಿಂಬಾಧಿವಾಸ, ಶಯ್ಯ ವಿಧಾನಗಳು ನಡೆಯಿತು. ಮಂಗಳವಾರ ಬೆಳಿಗ್ಗೆ ದುರ್ಗಾಹೋಮ, ಚಂಡಿಕಾ ಹೋಮ, ನವಗ್ರಹ ಹೋಮ, 10.15ಕ್ಕೆ ಶ್ರೀದೇವಿಯ ಬಿಂಬ ಪ್ರತಿಷ್ಠೆ, ತತ್ವಹೋಮ, ತತ್ವಕಲಶಾಭಿಷೇಕ ಎಡಪದವು ಬ್ರಹ್ಮಶ್ರೀ ತೆಂಕಮನೆ ಟಿ.ಮುರಳೀಧರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಮಾರಿಗುಡಿಯ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೀಧರ ಬೋವಿ, ಪ್ರ. ಕಾರ್ಯದರ್ಶಿ ಉಮೇಶ ಬೋವಿ, ಕಾರ್ಯದರ್ಶಿ ಲಕ್ಷ್ಮಣ ಬೋವಿ, ಕೋಶಾಕಾರಿ ಸುಂದರ ಬೋವಿ ಹಾಗೂ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
Next Story





