ಕಾನೂನು ಕಾಯ್ದೆಗಳ ಬಗ್ಗೆ ಮಹಿಳೆಯರು ಅರಿತುಕೊಳ್ಳಿ : ನ್ಯಾಯವಾದಿ ಶಶಿಕಲಾ

ಮೂಡುಬಿದಿರೆ : ಕಾನೂನು ಮಹಿಳೆಯರ ಪರವಾಗಿದೆ. ಕಾನೂನಿನ ಕಾಯ್ದೆಗಳನ್ನು ಅರಿತುಕೊಳ್ಳಲು ಮಹಿಳೆಯರು ಮುಂದಾಗಬೇಕಾಗಿದೆ ಎಂದು ನ್ಯಾಯವಾದಿ ಶಶಿಕಲಾ ಹೇಳಿದರು. ಅವರು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಮೂಡುಬಿದಿರೆ, ಪುರಸಭೆ ಮೂಡುಬಿದಿರೆ, ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆ ಇವುಗಳ ಜಂಟಿ ಆಶಯದಲ್ಲಿ ಇಲ್ಲಿನ ಸಮಾಜ ಮಂದಿರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ "ಮಹಿಳಾ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ" ಯ ಬಗ್ಗೆ ವಿಶೇ ಉಪನ್ಯಾಸ ನೀಡಿ ಮಾತನಾಡಿದರು.
ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗಣೇಶ್ ಬಿ. ಅವರು ಪ್ರಾಸ್ತಾವಿಕ ಮಾತಾನಾಡಿದರು. ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.. ಮುಖ್ಯ ಅತಿಥಿಗಳಾಗಿ ಕೆ. ಆರ್.ಪಂಡಿತ್, ಸಿ.ಡಿ.ಪಿ.ಒ., ಸಿ.ಕೆ. ಶ್ಯಾಮಲ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಕಾರಿ ತರಬೇತಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಯಿತು. ಶೋಭಾ ಸ್ವಾಗತಿಸಿದರು. ನಾಗತ್ನ ಕಾರ್ಯಕ್ರಮ ನಿರೂಪಿಸಿದರು.







