Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಇಚ್ಲಂಗೋಡು ಮಾಲಿಕ್ಕುದೀನಾರ್ ಉದಯಾಸ್ತಮಾನ...

ಇಚ್ಲಂಗೋಡು ಮಾಲಿಕ್ಕುದೀನಾರ್ ಉದಯಾಸ್ತಮಾನ ಉರೂಸ್

ವಾರ್ತಾಭಾರತಿವಾರ್ತಾಭಾರತಿ30 March 2016 8:12 PM IST
share

 ಮಂಗಳೂರು,ಮಾ.30: ಇಚ್ಲಂಗೋಡು ಮಾಲಿಕ್ಕುದೀನಾರ್ ಉದಯಾಸ್ತಮಾನ ಉರೂಸ್ ಉದ್ಘಾಟನೆಯನ್ನು ಎ.1 ರಂದು ಸಂಜೆ 6 ಗಂಟೆಗೆ ಬಹು.ಸಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೆರವೇರಿಸಲಿದ್ದಾರೆ ಎಂದು ಇಚ್ಲಂಗೋಡು ಮಸೀದಿ ಖತೀಬ್ ಮೊಹಮ್ಮದ್ ಶರೀಫ್ ಆಶ್ರಫಿ ಹೇಳಿದರು.

   ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಎ.1 ರಂದು ಸಂಜೆ ರಾಫಿಇಬ್ನ್ ಹಬೀಬ್ ಮಾಲಿಕ್ ದೀನಾರ್ ಅನಾಥಾಲಯ ಮತ್ತು ನಿರ್ಗತಿಕರ ಭವನಕ್ಕೆ ಶಿಲಾನ್ಯಾಸ ನೆರವೇರಲಿದೆ. ಅಂದಿನಿಂದ ಎ.30 ರವರೆಗೂ ನಿತ್ಯ ರಾತ್ರಿ 8 ಗಂಟೆಗೆ ಮಹತ್ವಪೂರ್ಣವಾದ ಧಾರ್ಮಿಕ ಪ್ರವಚನಗಳು ನಡೆಯಲಿದೆ ಎಂದು ಹೇಳಿದರು.

ಎ.22ರಂದುಸಂಜೆ 3 ಗಂಟೆಗೆ ವಿಶೇಷ ಮತಸೌಹಾರ್ದ ಸಮ್ಮೇಳನ ನಡೆಯಲಿದೆ. ಅಂದು ಪ್ರಮುಖ ಎಲ್ಲಾ ಧರ್ಮ ನೇತಾರರು, ರಾಜಕೀಯ ಪ್ರಮುಖರೂ ಭಾಗವಹಿಸಲಿದ್ದಾರೆ ಎಂದು ಹೇಳಿದರು.

  ಸುಪ್ರಸಿದ್ದ ಮತಪಂಡಿತರುಗಳಾದ ಕಾಸರಗೋಡು ಜಿಲ್ಲೆಯ ಅಲಿಕುಟ್ಟಿ ಮುಸ್ಲಿಯಾರ್ ಖಾಝಿ,ಸಯ್ಯದ್ ಅಲಿ ತಂಙಳ್ ಕುಂಬೋಲ್, ಯಾಸೀನ್ ಚೌಹರಿ ಕೊಲ್ಲಂ, ಅಬ್ದುಲ್ ಕರೀಂ ಕುಂತುರು, ಮುಳ್ಳುರ್ಕೇರೆ ಮಹಮ್ಮದಾಲಿ ಸಖಾಪಿ, ಖಾಲಿದ್ ಉವೈಸಿ ಇಡುಕ್ಕಿ,ಸಲೀಂ ಫೈಝಿ ಇರ್ಫಾನಿ ಮಟ್ಟನ್ನೂರು, ಮುಸ್ತಫಾ ಹುದವಿ ಅಕೋಡ್, ಇ.ಪಿ.ಅಬೂಬಕ್ಕರ್ ಅಲ್ ಖಾಸಿಮಿ ಪತ್ತಾನಾಪುರ, ಅಲ್ ಹಾಫಿಸ್ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತಾನಾಪುರ, ಅನ್ವರ್ ಮೊಹಿಯುದ್ದೀನ್ ಹುದವಿ ಆಲುವ, ಬಾಯಾರ್ ಪೊನ್ನಂಗಳ ಇಂಬಿಚ್ಚಿಕೋಯ ತಂಙಳ್, ಫಸಲ್ ಕೋಯಮ್ಮ ತಂಙಳ್ ಕುರ(ಖಾಸಿ ಉಳ್ಳಾಲ), ಪೆರೋಡ್ ಅಬ್ದುರಹ್ಮಾನ್ ಸಖಾಫಿ , ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಮುಂತಾದ ವಿದ್ವಾಂಸರು ಪ್ರವಚನ ದುವಾ ನೀಡಲಿದ್ದಾರೆ ಎಂದರು.

ಎ.30 ರಂದು ಸಮಾರೋಪ ಸಮಾರಂಭ ಜರಗಲಿದ್ದು ಪ್ರಧಾನ ಭಾಷಣಕಾರರಾಗಿ ಕಮರುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಬಹು. ಶೈಖುನಾ ಆಲಿಕುಂಞಿ ಮುಸ್ಲಿಯಾರ್ ವಹಿಸಲಿದ್ದು ಕುಂಬೋಲ್ ಸಯ್ಯಿದ್ ಕೆ.ಎಸ್.ಅಟ್ಟಕೋಯ ತಂಙಳ್ ಪ್ರಾರ್ಥನೆ ಮಾಡಲಿರುವರು. ಅದೇ ರಾತ್ರಿ ಉರೂಸ್ ಮೌಲಿದ್ ಪಾರಾಯಣ ನಂತರ ಸಾಮೂಹಿಕ ಭೋಜನ ಜರುಗಲಿದೆ ಎಂದು ಹೇಳಿದರು.

 ಎಲ್ಲಾ 30 ದಿನ ರಾತ್ರಿಗಳಲ್ಲೂ ಪ್ರವಚನವಿದ್ದು ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯವಿದೆ. ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಬಂದ್ಯೋಡು ಮೂಲಕ ಬಸ್ಸು ಸೌಕರ್ಯಗಳಿವೆ. ಬಹುಕಾಲದಿಂದ ಈ ಪುಣ್ಯಕ್ಷೇತ್ರಕ್ಕೆ ಉತ್ತರ ಭಾರತ, ಕರ್ನಾಟಕ, ಕೇರಳದ ವಿವಿಧ ಸ್ಥಳಗಳಿಂದ ಭಕ್ತರು ಬರಲಿರುವುದರಿಂದ ಪ್ರತ್ಯೇಕ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ. ಹರಕೆಗಳನ್ನು ನೇರವಾಗಿ ತಲುಪಿಸಬಹುದು ಅಥವಾ ಅಂಚೆ ಮೂಲಕ ಅಧ್ಯಕ್ಷರು, ಇಚ್ಲಂಗೋಡು ಮಲಿಕುದಿನಾರ್ ಜುಮ್ಮಾ ಮಸೀದಿ , ಇಚ್ಲಂಗೋಡು ಅಂಚೆ, ಮಂಗಲ್ಪಾಡಿ , ಕಾಸರಗೋಡು ಜಿಲ್ಲೆ 671324 ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಅಕೌಂಟ್ ಸಂಖ್ಯೆ 02866053000000240, ಸೌತ್ ಇಂಡಿಯನ್ ಬ್ಯಾಂಕ್, ಪಚ್ಚಂಬಲ ಬ್ರಾಂಚ್, ಇಚ್ಲಂಗೋಡು ಅಂಚೆ, ವಯಾ ಮಂಗಲ್ಪಾಡಿ, ಕಾಸರಗೋಡು ಜಿಲ್ಲೆ ಇಲ್ಲಿಗೆ ಕಳುಹಿಸಬಹುದು.ದೂರವಾಣಿ ಸಂಖ್ಯೆ 04998263265 ಸಂಪರ್ಕಿಸಬಹುದೆಂದು ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಶೋಧಕ ಪ್ರೊ.ಬಿ.ಎಂ.ಇಚ್ಲಂಗೋಡ್, ಹೈದರ್ ಪರ್ತಿಪಾಡಿ, ಅನ್ಸಾರ್, ಮೂಸ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X