ಕೊಣಾಜೆ: ಮಂಗಳೂರು ವಿವಿಯಲ್ಲಿ ಇಂದು ದರ್ಪಣಕ್ರೀಡಾಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಅಂತರ್ ರಾಷ್ಟ್ರೀಯ, ಅಂತರ್ ವಿಶ್ವವಿದ್ಯಾನಿಲಯ ಮತ್ತು ಅಂತರ್ ಕಾಲೇಜು ಕ್ರೀಡಾಕೂಟಗಳಲ್ಲಿ ಸಾಧ ೆ ಗೈದ ಕ್ರೀಡಾ ಸಾಧಕರಿಗೆ ಸನ್ಮಾನ ‘ದರ್ಪನಸಮಾರಂಭವು ಮಾ.31ರಂದು ಸಮಯ ಮಧ್ಯಾಹ್ನ 2.00 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.
ವಿವಿ ಕುಲಪತಿ ಪ್ರೊ.ಕೆ.ಬೈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಹಾಕಿ ಕ್ರೀಡಾ ಪಟು ಅರ್ಜುನ್ ಹಾಲಪ್ಪ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಹಾಸ್ಯ ಕಲಾವಿದರಾದ ಪ್ರೊಫೆಸರ್ ಕೃಷ್ಣೇಗೌಡ, ಪ್ರಾಂಶುಪಾಲರು, ಸೈಂಟ್ ಫಿಲೋಮಿನಾ ಕಾಲೇಜು, ಮೈಸೂರು ಮತ್ತು ಪ್ರೊ. ಕಬಡ್ಡಿ ಕ್ರೀಡಾಪಟುಗಳಾದ ಸುಕೇಶ್ ಹೆಗ್ಡೆ ಮತ್ತು ಸಚಿನ್ ಸುವರ್ಣ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಅಂತರ್ ವಿಶ್ವವಿದ್ಯಾನಿಲಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಆಳ್ವಾಸ್ ಕಾಲೇಜು ಮೂಡಬಿದ್ರೆ ಇವರಿಂದ ಏಕ ಪಾತ್ರಾಭಿನಯ, ನಾಟಕ, ಎಸ್‌ಡಿಎಮ್ ಕಾಲೇಜು, ಉಜಿರೆ ಇವರಿಂದ ಜಾನಪದನೃತ್ಯಗಳು, ರಂಗೋಲಿ ಹಾಗೂ ಚರ್ಚೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿರುವುದು. ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಂತರ ಸಾಯಂಕಾಲ ಗಂಟೆ 6ರಿಂದ ವಿಶೇಷ ಮನರಂಜನೆ ಕಾರ್ಯಕ್ರಮ ನಡೆಯಲಿರುವುದು. ಪ್ರೊ. ಕೃಷ್ಣೇಗೌಡ ಇವರು ಹಾಸ್ಯ ಲಹರಿ ಕಾರ್ಯಕ್ರಮ ನೀಡಲಿರುವರು. ಅಲ್ಲದೆ ಕ್ರೀಡಾಪಟುಗಳ ಸಾಧನೆಗೆ ಬಹಳಷ್ಟು ಪ್ರೋತ್ಸಾಹ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಮತ್ತು ತರಬೇತಿದಾರರನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





