ಕೊಣಾಜೆ: ‘ಸ್ಪಂದನಾ ಮನೋರಂಜನ್ -2016’ ಜಾದೂ ಪ್ರದರ್ಶನ: ಸನ್ಮಾನ

ಅಂಬಿಕಾ ಬಾಲ ವಿದ್ಯಾಲಯದ 1ನೇ ತರಗತಿಯ ಪುಟಾಣಿ ಮಾರೋಶನ್ ಅವರನ್ನು ಸನ್ಮಾನಿಸಲಾಯಿತು.
ಕೊಣಾಜೆ: ಕುಳಾಯಿಯ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಮಾರ್ಚ್ ರಂದು ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಕುಳಾಯಿ ಇವರು ಅರ್ಪಿಸಿದ ‘ಸ್ಪಂದನಾ ಮನೋರಂಜನ್ -2016’
ವೈವಿಧ್ಯಮಯ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಕುಶಮಾ ಪರ್ವಿನ್ ತಾಜ್ ನಿರ್ದೇಶನದ ’ಕಲಾಸೃಷ್ಟಿ’ ತಂಡದಿಂದ ವೈವಿಧ್ಯಮಯ ಜಾದೂ ಪ್ರದರ್ಶನ ಎಲ್ಲರ ಮನಸೆಳೆಯಿತು. ತಂಡದ ಕಿರಿಯ ಜಾದೂ ಪ್ರತಿಭೆ, ಅಂಬಿಕಾ ಬಾಲ ವಿದ್ಯಾಲಯದ 1ನೇ ತರಗತಿಯ ಪುಟಾಣಿ ಮಾರೋಶನ್ ಅವರನ್ನು ಸನ್ಮಾನಿಸಲಾಯಿತು. ಮಂಗಳೂರಿನ ಬ್ಯಾರಿಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್, ರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಮುಬೀನಾ ಪರ್ವಿನ್ ತಾಜ್ ಹಾಗೂ ಕುಶಮಾ ಪರ್ವಿನ್ ತಾಜ್ ಉಪಸ್ಥಿತರಿದ್ದರು.
Next Story





