ನಾಳೆ ವಸಂತ ರಂಗಮೇಳ
ಬೆಂಗಳೂರು, ಮಾ. 30: ಬೀಯಿಂಗ್ ರಂಗಮಂಚ ಸಂಸ್ಥೆಯು ನಗರದ ಕೋರಮಂಗಲದಲ್ಲಿರುವ ಅಟ್ಟ ಗಲಾಟ್ಟದಲ್ಲಿ ಎ.1ರಂದು ವಸಂತ ರಂಗಮೇಳ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಅಭಯ್ ಶರಣ ತಿಳಿಸಿದ್ದಾರೆ.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಸಂತ ರಂಗಮೇಳವನ್ನು ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಕನ್ನಡ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಉತ್ಸವ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ 10ಕ್ಕೂ ಅಕ ತಂಡಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು. ತೀರ್ಪುಗಾರರಾಗಿ ಪ್ರಸಿದ್ಧ ರಂಗಕಲಾವಿದ ಹಾಗೂ ನಿರ್ದೇಶಕ ಸತ್ಯ ಭಾರದ್ವಾಜ್ ಹಾಗೂ ಸುಧಾಪ್ರಸನ್ನ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯಅಥಿತಿಯಾಗಿ ನಟ ಸಂಚಾರಿ ವಿಜಯ್ ಪಾಲ್ಗೊಳ್ಳಲಿದ್ದಾರೆ ಎಂದರು.
Next Story





