ಎ.2ರಂದು ಲಾಟರಿ ಮೂಲಕ ಯಾತ್ರಿಗಳ ಆಯ್ಕೆ
ಹಜ್‌ಯಾತ್ರೆ-2016
ಬೆಂಗಳೂರು, ಮಾ.30: ಪ್ರಸಕ್ತ ಸಾಲಿನ ಪವಿತ್ರ ಹಜ್‌ಯಾತ್ರೆಗೆ ರಾಜ್ಯದಿಂದ ತೆರಳುವ ಯಾತ್ರಿಗಳನ್ನು ಎ.2ರಂದು ಸಂಜೆ 4 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಖುರ್ರಾ(ಆನ್‌ಲೈನ್ ಲಾಟರಿ) ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಯಾತ್ರಿಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛೆಯುಳ್ಳವರು ಹಜ್‌ಯಾತ್ರೆಗೆ ಅರ್ಜಿಸಲ್ಲಿಸಿದ ಸಂದರ್ಭದಲ್ಲಿ ರಾಜ್ಯ ಹಜ್ ಸಮಿತಿ ವತಿಯಿಂದ ನೀಡಲಾಗಿರುವ ಸ್ವೀಕೃತಿ ಪತ್ರ ಹಾಗೂ ವಿಧಾನಸೌಧದೊಳಗೆ ಪ್ರವೇಶಿಸಲು ಭದ್ರತೆಯ ದೃಷ್ಟಿಯಿಂದ ತಮ್ಮ ಗುರುತಿನ ಚೀಟಿಯನ್ನು ಜೊತೆ ತರುವಂತೆ ಕೋರಲಾಗಿದೆ.
ಖುರ್ರಾದಲ್ಲಿ ಯಾತ್ರೆಗೆ ಆಯ್ಕೆಯಾಗುವಂತಹ ಯಾತ್ರಿಗಳ ವಿವರಗಳನ್ನು ಭಾರತೀಯ ಹಜ್ ಸಮಿತಿಯ ವೆಬ್‌ಸೈಟ್ www.hajcommittee.com ಹಾಗೂ ರಾಜ್ಯ ಹಜ್ ಸಮಿತಿಯ www.karhaj.inನಲ್ಲಿ ಪ್ರಕಟಿಸಲಾಗುವುದು ಎಂದು ರಾಜ್ಯ ಹಜ್ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್‌ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





