ತಾಜ್ ಮಹಲ್‌ನಲ್ಲಿ ಕೆಳಗೆ ಬಿದ್ದ ಹಿತ್ತಾಳೆ ಕಲಶ
ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಕರ್ತವ್ಯ ಲೋಪ ಕಾರಣ?
ಆಗ್ರಾ, ಮಾ.30 : ವಿಶ್ವದ ಏಳು ಅದ್ಭುತಗಳಲ್ಲೊಂದಾದ ಆಗ್ರಾದ ತಾಜ್ ಮಹಲಿನ ನಾಲ್ಕು ಸ್ತಂಭಗೋಪುರಗಳಲ್ಲಿ ಒಂದು ಗೋಪುರದ ತುತ್ತತುದಿಯಲ್ಲಿರುವ ಹಿತ್ತಾಳೆಯ ಕಲಶವೊಂದು ಮಂಗಳವಾರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೆ ಈ ಘಟನೆಯಿಂದ ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಕಷ್ಟಕ್ಕೀಡಾಗಿದ್ದುಈ ವಿಶ್ವವಿಖ್ಯಾತ ಸ್ಮಾರಕದ ಸಂರಕ್ಷಣೆ ಹಾಗೂ ನಿರ್ವಹಣೆಯ ಬಗ್ಗೆ ಹಲವಾರು ಸಂಶಯಗಳೆದ್ದಿವೆ.
ಈ ಘಟನೆಯ ನಂತರ ತನ್ನನ್ನು ಸಮರ್ಥಿಸಿಕೊಂಡಿರುವಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಈ ಹಿತ್ತಾಳೆ ಕಲಶವನ್ನು ಅಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯಗಳ ಅಂಗವಾಗಿ ಕಾರ್ಮಿಕರು ಕೆಳಕ್ಕೆ ತಂದಿದ್ದಾರೆ ಎಂದು ಹೇಳಿಕೊಂಡಿದೆ.‘‘ಅದರ ಒಳಗಿನ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದಿರುವುದರಿಂದ ಈ ಕ್ರಮ ಕೈಗೊಳ್ಳಲಾಯಿತು,’’ ಎಂದು ದುರಸ್ತಿ ಕಾರ್ಯದ ಉಸ್ತುವಾರಿಯನ್ನು ಹೊತ್ತರಾವ್ ರತನ್ ಹೇಳಿದ್ದಾರೆ.
Next Story





