ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂದ ರೈತನಿಗೆ ‘ಹೋಗಿ ಮಾಡಿಕೋ’ ಎಂದ ಕೇಂದ್ರ ಸಚಿವ!
ಜೈಪುರ, ಮಾ.30: ಅಸಂವೇದಿತನದ ಪರಮಾವಧಿ ಎಂದೇ ಹೇಳಿಕೊಳ್ಳಬಹುದಾದಂತಹ ಪ್ರಕರಣವೊಂದರಲ್ಲಿನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಸಂಜೀವ್ ಬಲಿಯಾನ್‌ತನ್ನ ಸಮಸ್ಯೆಗಳನ್ನು ಹೇಳಿಕೊಂಡ ರೈತನೊಬ್ಬ ಅದನ್ನು ಪರಿಹರಿಸದಿದ್ದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂದು ಹೇಳಿದಾಗ ಸಿಟ್ಟಿನಿಂದ ‘ಹೋಗಿ ಮಾಡಿಕೋ’ ಎಂದು ಹೇಳಿ ಈಗ ವಿವಾದಕ್ಕೀಡಾಗಿದ್ದಾರೆ.
ಸಚಿವ ಬಿಜೆಪಿ ಆಡಳಿತವಿರುವ ರಾಜ್ಯವಾದ ರಾಜಸ್ಥಾನದ ಟೊಂಕ್ ನಗರದಲ್ಲಿ ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಕೌನ್ಸಿಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದ ಸಂದರ್ಭ ರೈತನೊಬ್ಬ ಅವರನ್ನು ಭೇಟಿಯಾಗಿ ತನ್ನ ಸಮಸ್ಯೆ ಅರುಹಿದಾಗ ಈ ಘಟನೆ ನಡೆಯಿತೆಂದು ಐಬಿಎನ್ ಖಬರ್ ವರದಿಯೊಂದು ತಿಳಿಸಿದೆ.
Next Story





