5 ವರ್ಷಗಳಲ್ಲಿ ಶೇ.32 ಹೆಚ್ಚಳಗೊಂಡ ಸಾಂಕ್ರಾಮಿಕ ರೋಗಗಳು ಆದರೆ ಏರಿಕೆಯಾದ ಖರ್ಚು ಶೇ.7
ಭಾರತದಲ್ಲಿ ವ್ಯಾಪಕವಾಗಿರುವ ಸಾಂಕ್ರಾಮಿಕ ರೋಗಗಳಾದ ಮಲೇರಿಯ ಜ್ವರ, ಕ್ಷಯ ಮತ್ತು ಕುಷ್ಠರೋಗಗಳನ್ನು ನಿಯಂತ್ರಿಸಲು ಕಳೆದ ಐದು ವರ್ಷಗಳ ವೆಚ್ಚದಲ್ಲಿ ಶೇ.7ರಷ್ಟನ್ನು ಅಧಿಕಗೊಳಿಸಲಾಗಿದೆ. ಆದರೆ ಇದೇ ಕಳೆದ ಐದು ವರ್ಷಗಳಲ್ಲಿ ಈ ರೋಗಗಳ ಹರಡುವಿಕೆ ಮಾತ್ರ ಶೇ.7ರಷ್ಟು ಅಧಿಕಗೊಂಡಿರುವುದು ಇಂಡಿಯ ಸ್ಪೆಂಡ್ ಸಂಸ್ಥೆ ನಡೆಸಿದ ಅಧ್ಯಯನದ ಅಂಕಿಅಂಶಗಳಿಂದ ತಿಳಿದುಬಂದಿದೆ.
ಮಲೇರಿಯಾ ರೋಗವನ್ನು ಹೊರತುಪಡಿಸಿ ಉಳಿದ ರೋಗಗಳು ಏರುಗತಿಯಲ್ಲಿ ಹರಡಿರುವುದು ಕಳೆದ ಐದು ವರ್ಷಗಳಲ್ಲಿ ದೃಢಪಟ್ಟಿದೆ
ಈ ಅಧ್ಯಯನದ ಪ್ರಕಾರ ಕಳೆದ ಐದು ವರ್ಷಗಳ ಬಜೆಟ್‌ನಲ್ಲಿ ಅಧಿಕಗೊಂಡ ರೋಗ ನಿಯಂತ್ರಣ ವೆಚ್ಚ ಮತ್ತು ರೋಗ ನಿಯಂತ್ರಣದಲ್ಲಿ ಪರಸ್ಪರ ಸಂಬಂಧ ಕಂಡುಬಂದಿಲ್ಲ. ಮಲೇರಿಯ ಜ್ವರ, ಡೆಂಗ್, ಚಿಕುನ್‌ಗುನ್ಯ ಮತ್ತು ಜಪಾನಿ ಎನ್ಸೆಫಾಲಿಟಿಸ್ ರೋಗಗಳನ್ನು ನ್ಯಾಶನಲ್ ವೆಕ್ಟರ್-ಬೋನ್ ಡಿಸೀಸ್ ಕಂಟ್ರೋಲ್ ಕಾರ್ಯಕ್ರಮದಡಿ ಈ ರೋಗಗಳ ನಿಯಂತ್ರಣ ಕಾರ್ಯ ಜಾರಿಯಲ್ಲಿದೆ.
ರಾಷ್ಟ್ರೀಯ ವೆಕ್ಟರ್ ಹರಡುವ ರೋಗ ನಿಯಂತ್ರಣ ಕಾರ್ಯಕ್ರಮ, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮಗಳಿಗೆ ಮತ್ತು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರವು ಈ ಆರ್ಥಿಕ ಸಹಕಾರ ನೀಡುತ್ತದೆ ಹಾಗೂ ಮಗು ಮತ್ತು ತಾಯಿಯ ಆರೋಗ್ಯ, ಆರೋಗ್ಯ ಮೂಲಸೌಕರ್ಯ, ತಡೆಗಟ್ಟುವಿಕೆ, ಆರಂಭಿಕ ಪತ್ತೆ, ರೋಗ ನಿರ್ಣಯ ಮತ್ತು ಚಿಕಿತ್ಸೆಗಾಗಿ ಕಾರ್ಯಕ್ರಮಗಳನ್ನು ಒಳಗೊಂಡಿರುವ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಧನ ಸಹಾಯ ಮಾಡಲಾಗುತ್ತದೆ.
ಅಕೌಂಟೆಬಿಲಿಟಿ ಇನಿಶಿಯೇಟಿವ್ ವರದಿ ಪ್ರಕಾರ ರಾಷ್ಟ್ರೀಯ ಆರೋಗ್ಯ ಮಿಷನ್ ಬಜೆಟ್‌ನಲ್ಲಿ ಶೇ.12 ರಷ್ಟು ಹೆಚ್ಚಳ ಅಂದರೆ 19,307 ಕೋಟಿ ರೂ. ಮತ್ತು 17,118 ಕೋಟಿ ರೂ. 2012 ಮತ್ತು 2016ರ ಸಮಯದಲ್ಲಿ ವ್ಯಯಿಸಲಾಗಿದೆ. ಡಾಲರ್ ಲೆಕ್ಕದಲ್ಲಿ, ಹಂಚಿಕೆ 2.9ಶತಕೋಟಿಯು 3.2 ಶತಕೋಟಿಗೆ ಕುಸಿಯಿತು. 2001-12ರಲ್ಲಿ ಡಾಲರ್ ರೂ. 51ರಿಂದ 2016-17ರಲ್ಲಿ ಡಾಲರ್ 65 ರೂ.ಗೆ ವಿನಿಮಯ ದರ ಹೆಚ್ಚಳ ಕಂಡಿದೆ. ಡಾಲರ್ ಭಾರತೀಯ ಹಣದ ಮೌಲ್ಯವು ಕಳೆದ ಐದು ವರ್ಷಗಳಲ್ಲಿ ಕುಸಿತ ಕಂಡುಬಂದಿದೆ.
ಒಂದು ಅವಲೋಕನ
ಐದು ವರ್ಷಗಳಲ್ಲಿ ಹಂಚಿಕೆ ಹಣ ಮೂರು ಪ್ರಮುಖ ಕಾರ್ಯಕ್ರಮಗಳಿಗೆ ಶೇ.7.2 ರಷ್ಟು ಅಧಿಕಗೊಂಡಿವೆ. ರಾಷ್ಟ್ರೀಯ ವೆಕ್ಟರ್ ಹರಡುವ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಮಲೇರಿಯ, ಕೀಲುನೋವು, ಚಿಕುನ್‌ಗುನ್ಯ ಮತ್ತು ಜಪಾನಿನ ಎನ್ಸೆಫಾಲಿಟಿಸ್ ಒಳಗೊಂಡಿವೆ. ಕಾಳ ಜ್ವರ ಮತ್ತು ದುಗ್ಧರಸದ ಫೈಲೇರಿಯಾಸಿಸ್ ಹೋಗಲಾಡಿಸುವ ಕೆಲಸಕ್ಕಾಗಿ 2012ರಲ್ಲಿ ಈ ಕಾರ್ಯಕ್ರಮದಿಂದ ಹಂಚಿಕೆಯಾದ 482 ಕೋಟಿ ರೂ. ಮತ್ತು 2015-16ರಲ್ಲಿ ವ್ಯಯಿಸಿದ ಮೊತ್ತ 462 ಕೋಟಿ. ಮಲೇರಿಯ ಪ್ರಕರಣಗಳಲ್ಲಿ ಶೇ.14ರಷ್ಟು ಹರಡುವಿಕೆ ಇಳಿಮುಖವಾಗಿದ್ದು, ಡೆಂಗ್ ಪ್ರಕರಣದಲ್ಲಿ ಇದು ಶೇ.4ರಷ್ಟು ಹೆಚ್ಚಳಗೊಂಡಿರುವುದು ಕಂಡು ಬರುತ್ತದೆ. ಚಿಕುನ್‌ಗುನ್ಯ ಮತ್ತು ಜಪಾನಿ ಎನ್ಸೆಫಾಲಿಟಿಸ್‌ಗಳಲ್ಲಿ ಶೇ.33ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಲೋಕಸಭೆಯಲ್ಲಿ ಚರ್ಚಿಸಲಾಗಿದೆ.
2011 ಮತ್ತು 2016 ನಡುವೆ ಕ್ಷಯ ರೋಗ ನಿಯಂತ್ರಣಕ್ಕಾಗಿ ಬಜೆಟ್‌ನಲ್ಲಿ ಶೇ.23ರಷ್ಟು ಅಧಿಕ ಮೊತ್ತವನ್ನು ತೆಗೆದಿರಿಸಲಾಗಿದೆ. ಆದರೆ ರೋಗ ನಿಂತ್ರಣವನ್ನು ಸಾಧಿಸಲು ಸಾಧ್ಯವಾಗಿಲ್ಲ.
ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಧನಸಹಾಯದಲ್ಲಿ ಶೇ.16ರಷ್ಟು ಕುಸಿತವಾಗಿದ್ದ ಸಂದರ್ಭಗಳಲ್ಲಿ ರಾಷ್ಟ್ರವ್ಯಾಪಿ ಕುಷ್ಠರೋಗ ಶೇ.36ರಷ್ಟು ಹೆಚ್ಚಳವಾಯಿತು.
ಈ ಸಾಂಕ್ರಾಮಿಕ ರೋಗಗಳು ಹೆಚ್ಚಳವಾಗಲು ಔಷಧ ಮತ್ತು ಚಿಕಿತ್ಸೆ ಪ್ರವೇಶಗಳ ಕುರಿತು ಅರಿವಿನ ಕೊರತೆಯು ಕೂಡ ಕಾರಣವಾಗಿದೆ.
ಕಳೆದ ಐದು ವರ್ಷಗಳಿಂದ ಮೂರು ಪ್ರಮುಖ ಕಾರ್ಯಕ್ರಮಗಳ ಅಡಿಯಲ್ಲಿ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡಿದೆ. ರಾಷ್ಟ್ರೀಯ ವೆಕ್ಟರ್ ಹರಡುವ ರೋಗ ನಿಯಂತ್ರಣ ಕಾರ್ಯಕ್ರಮ, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮಗಳಿಗೆ 2011-12 ರಲ್ಲಿ 947 ಕೋಟಿ ರೂ. ವ್ಯಯಿಸಿದ್ದ ಸರಕಾರ 2015-16ರ ಬಜೆಟ್‌ನಲ್ಲಿ 395 ಕೋಟಿ ರೂ.ಮಾತ್ರ ಬಳಸಿತು. 2011-12 ಮತ್ತು 2014-15ರ ವೇಳೆ ಈ ರೋಗ ನಿಯಂತ್ರಣ ಕಾರ್ಯಕ್ರಮಗಳಿಗಾಗಿ ನಿಗದಿಗಿಂತಲೂ ಅಧಿಕ ಹಣವನ್ನು ಬಳಸಲಾಗಿತ್ತು.
ಕಳೆದ ಐದು ವರ್ಷಗಳ ಬಜೆಟ್‌ನಲ್ಲಿ ಅಧಿಕಗೊಂಡ ರೋಗ ನಿಯಂತ್ರಣ ವೆಚ್ಚ ಮತ್ತು ರೋಗ ನಿಯಂತ್ರಣದಲ್ಲಿ ಪರಸ್ಪರ ಸಂಬಂಧ ಕಂಡುಬಂದಿಲ್ಲ. ಮಲೇರಿಯ ಜ್ವರ, ಡೆಂಗ್, ಚಿಕುನ್‌ಗುನ್ಯ ಮತ್ತು ಜಪಾನಿ ಎನ್ಸೆಫಾಲಿಟಿಸ್ ರೋಗಗಳನ್ನು ನ್ಯಾಶನಲ್ ವೆಕ್ಟರ್-ಬೋನ್ ಡಿಸೀಸ್ ಕಂಟ್ರೋಲ್ ಕಾರ್ಯಕ್ರಮದಡಿ ಈ ರೋಗಗಳ ನಿಯಂತ್ರಣ ಕಾರ್ಯ ಜಾರಿಯಲ್ಲಿದೆ.