ಎಸ್‌ಎಸ್‌ಸಿ ಮೇಲಿನ ಬಡ್ಡಿದರದಲ್ಲಿ ಕಡಿತ
ಕೊನೆಗೂ ಸರಕಾರ ಸಣ್ಣ ಉಳಿತಾಯ ಖಾತೆಗಳ ಮೇಲೆ ವಿಧಿಸಿದ್ದ ಬಡ್ಡಿ ದರವನ್ನು ಕಡಿತಗೊಳಿಸಿದೆ. ಸದ್ಯದ ಆರ್ಥಿಕ ಪರಿಸ್ಥಿತಿ ಹಣದುಬ್ಬರದಿಂದ ಕೂಡಿದೆ. ಬಡ್ಡಿ ದರಗಳು ಇಳಿಮುಖವಾಗಿರುವುದರಿಂದ ಆರ್ಥಿಕತೆಯನ್ನು ಸರಿದೂಗಿಸಲು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ, ಈ ನಿರ್ಣಯ ಈಗಾಗಲೇ ಜಾರಿಯಾಗಿದ್ದು, ಕೆಲ ತಿಂಗಳ ಹಿಂದೆ ಈ ಖಾತೆಗಳ ಬದಲಾವಣೆಯ ಕುರಿತು ನಿರೀಕ್ಷೆ ಇದ್ದರೂ ಕೂಡ ಹಿರಿಯ ನಾಗರಿಕರ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರಗಳನ್ನು ಏರಿಸಿಲ್ಲ. ಈ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ಮಾಹಿತಿಯನ್ನು ನೀಡಲಾಗಿದೆ. ಪಿಪಿಎಫ್ ದರದಲ್ಲಿ 0.6ರಷ್ಟನ್ನು, ಎಸ್‌ಎಸ್‌ಸಿ ಮೇಲಿನ ಬಡ್ಡಿದರದಲ್ಲಿ 0.7ರಷ್ಟು, ಎನ್‌ಎಸ್ಸಿಯ 0.4 ರಷ್ಟು ದರಗಳನ್ನು ಕಡಿತಗೊಳಿಸಲಾಗಿದೆ.
ಈ ಅಂಶಗಳು ಬಹಿರಂಗಗೊಳಿಸಿದ ನಂತರವೂ ಇವು ಜನರಲ್ಲಿ ತಪ್ಪು ಅಭಿಪ್ರಾಯಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆಗಳಿವೆ. ಏಕೆಂದರೆ ಈ ಕಡಿತಗೊಂಡ ದರಗಳು ಉಳಿತಾಯ ಖಾತೆಗಳು ಗಳಿಸುವ ಗಳಿಕೆಗಳ ಮೇಲೆ ಒತ್ತು ನೀಡುವುದಿಲ್ಲ. ಈ ಪ್ರಕಾರ ಹಿರಿಯ ನಾಗರಿಕರ ಉಳಿತಾಯ ಖಾತೆಗಳ ಒಟ್ಟು ವಾರ್ಷಿಕ ಉಳಿತಾಯ ದರದಲ್ಲಿ ಶೇಕಡ 7.5ರಷ್ಟು ಅಂಕಗಳು ಇಳಿಮುಖಗೊಳ್ಳುತ್ತವೆ. ಉದಾಹರಣೆಗೆ ಒಬ್ಬ ಹಿರಿಯ ನಾಗರಿಕ ಗರಿಷ್ಠ 15 ಲಕ್ಷ ರೂಪಾಯಿಯನ್ನು ಎಸ್‌ಎಸ್‌ಸಿ ಖಾತೆಯಲ್ಲಿ ಠೇವಣಿ ಇಟ್ಟರೆ ಈ ಮೊದಲು ಅದರಿಂದ 11,625 ರೂಪಾಯಿಯನ್ನು ಬಡ್ಡಿಯಾಗಿ ಪಡೆಯುತ್ತಿದ್ದರು. ಆದರೆ ಹೊಸ ಆರ್ಥಿಕ ನೀತಿಯ ಪ್ರಕಾರ ಆ ಬಡ್ಡಿ ದರವು 10,750 ರೂಪಾಯಿಗೆ ಇಳಿಯಲಿದೆ. ಹಣದುಬ್ಬರ, ಬಡ್ಡಿದರದಲ್ಲಿ ಕಡಿತ ಮತ್ತು ಆರ್ಥಿಕತೆಗಳಲ್ಲಾದ ಬೆಳವಣಿಗೆಗಳು ಹಿರಿಯ ನಾಗರಿಕರ ಉಳಿತಾಯ ಖಾತೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಹಿರಿಯ ನಾಗರಿಕರ ಉಳಿತಾಯ ಖಾತೆ ಯೋಜನೆ ಸಣ್ಣ ಯೋಜನೆಯಾಗಿದ್ದರೂ ಕೂಡ ಫಲಾನುಭವಿಗಳ ದೃಷ್ಟಿಕೋನದಿಂದ ಅತ್ಯಂತ ಅನುಕೂಲವಾದ ಮತ್ತು ಮಹತ್ವದ ಯೋಜನೆಯಾಗಿತ್ತು. ಈ ಯೋಜನೆಯಲ್ಲಿ ಮಾಡಲಾದ ಬದಲಾವಣೆಯಿಂದ ಸರಕಾರಕ್ಕೆ ವಾರ್ಷಿಕವಾಗಿ 150 ಕೋಟಿ ರೂ. ಉಳಿತಾಯವಾಗುತ್ತದೆ. ಆದರೆ ಸರಕಾರದ ಈ ಸಣ್ಣ ಉಳಿತಾಯ ಆನೇಕ ಹಿರಿಯ ಜೀವಗಳ ಮೇಲೆ ಪರಿಣಾಮ ಬೀರುತ್ತದೆ.