ಎ.3: ಮಿತ್ತಬೈಲ್ ಶಾದಿಮಹಲ್ ಕಟ್ಟಡಕ್ಕೆ ಶಿಲಾನ್ಯಾಸ
ವಿಟ್ಲ, ಮಾ.30: ಬಿ.ಸಿ.ರೋಡ್ ಸಮೀಪದ ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ಅಧೀನದಲ್ಲಿ ನಿರ್ಮಿಸಲುದ್ದೇಶಿಸಿರುವ ಶಾದಿ ಮಹಲ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಎ.3ರಂದು ಸಂಜೆ ನಡೆಯಲಿದೆ ಎಂದು ಮಸೀದಿ ಕಾರ್ಯದರ್ಶಿ ಮುಹಮ್ಮದ್ ಅದ್ದೇಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಿತ್ತಬೈಲು ಮಸೀದಿ ಪಕ್ಕದ 1 ಎಕರೆ ಜಮೀನಿನಲ್ಲಿ ಸುಮಾರು 3 ಕೋ.ರೂ. ವೆಚ್ಚದಲ್ಲಿ ಶಾದಿಮಹಲ್ ನಿರ್ಮಾಣಗೊಳ್ಳಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಶಿಲಾನ್ಯಾಸಗೈಯುವರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷ ಹಬೀಬುಲ್ಲಾ, ಕೋಶಾ ಧಿಕಾರಿ ಎಸ್.ಎಂ. ಮುಹಮ್ಮದ್ ಅಲಿ, ಸದಸ್ಯರಾದ ಅಶ್ರಫ್, ಯೂಸುಫ್ ಶಬ್ನಂ, ಸಲಾಂ ಹಾಗೂ ಶಾಹುಲ್ ಅದ್ದೇಡಿ ಉಪಸ್ಥಿತರಿದ್ದರು.
Next Story