ವಿಮಾನದಲ್ಲಿ ತ್ರಿಶೂಲ ಒಯ್ದ ರಾಧಾ ಮಾ ವಿರುದ್ಧ ಎಫ್‌ಐಆರ್
ಮುಂಬೈ, ಮಾ.30: ಕಳೆದ ವರ್ಷ ವಿಮಾನದಲ್ಲಿ ತ್ರಿಶೂಲ ಒಯ್ದ ಅರೋಪದ ಸಂಬಂಧ ಸ್ವಯಂಘೋಷಿತ ದೇವಮಹಿಳೆ ರಾಧಾ ಮಾ ವಿರುದ್ಧ ಅಂಧೇರಿ ನ್ಯಾಯಾಲಯದ ಸೂಚನೆಯಂತೆ ವಿಮಾನ ನಿಲ್ದಾಣ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ರಾಧಾ ಮಾ ಜತೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಮೂವರು ಅಧಿಕಾರಿಗಳು, ವಿಮಾನಯಾನ ಸಂಸ್ಥೆ ಹಾಗೂ ಅದರ ಉದ್ಯೋಗಿಗಳ ವಿರುದ್ಧವೂ ದೂರು ದಾಖಲಾಗಿದೆ.ತಿಂಗಳ ಆರಂಭದಲ್ಲಿ ಅಂಧೇರಿ ನ್ಯಾಯಾಲಯ ನೀಡಿದ ಸೂಚನೆಯ ಮೇರೆಗೆ ಮಂಗಳವಾರ ಸಂಜೆ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ದೂರು ನೀಡಿದ ಅಸಾದ್ ಪಟೇಲ್, ಮಾಹಿತಿ ಹಕ್ಕು ಹೋರಾಟಗಾರ. ತ್ರಿಶೂಲ ಅಪಾಯಕಾರಿ ಹಾಗೂ ಪ್ರಯಾಣಿಕರಿಗೆ ಹಾನಿ ಮಾಡಬಹುದು. ನಾಗರಿಕ ವಿಮಾನಯಾನ ಭದ್ರತಾ ಮಂಡಳಿ ನಿಷೇಧಿಸಿದ ಹಲವು ಸಾಧನಗಳಲ್ಲಿ ಇದು ಕೂಡಾ ಸೇರಿದೆ ಎಂದು ಪಟೇಲ್ ತಮ್ಮ ದೂರಿನಲ್ಲಿ ವಿವರಿಸಿದ್ದರು.
Next Story





