ಘೋಷಣೆ ಕೂಗಲು ನಿರಾಕರಿಸಿದ ಬಾಲಕರ ಮೇಲೆ ಮಾರಣಾಂತಿಕ ಹಲ್ಲೆ
ಹೊಸದಿಲ್ಲಿ,ಮಾ.30: ದಿಲ್ಲಿಯ ಹೊರವಲಯ ಬೇಗಂಪುರ್‌ನ ಶಾಲೆಯೊಂದರ ಸಮೀಪದ ಪಾರ್ಕ್‌ನಲ್ಲಿ ‘ಜೈ ಮಾತಾದಿ’ ಘೋಷಣೆ ಕೂಗಲು ನಿರಾಕರಿಸಿದ 18 ವರ್ಷದ ಬಾಲಕ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಮಾರಣಾಂತಿಕವಾಗಿ ಥಳಿಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪಾರ್ಕ್‌ನಲ್ಲಿದ್ದ ಈ ಬಾಲಕರನ್ನು ದುಷ್ಕರ್ಮಿಗಳ ಗುಂಪು ‘ಜೈ ಮಾತಾದಿ’ ಎಂದು ಕೂಗುವಂತೆ ಬಲವಂತ ಪಡಿಸಿದ್ದರು. ಅದಕ್ಕೆ ಅವರು ಒಪ್ಪದಿದ್ದಾಗ, ದುಷ್ಕರ್ಮಿಗಳು ಅವರನ್ನು ಲಾಠಿಗಳಿಂದ ಥಳಿಸಿದರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಮೂವರು ಬಾಲಕರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಘಟನೆಯ ಬಗ್ಗೆ ದೂರು ನೀಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಈ ಬಾಲಕರು, 18ರಿಂದ 21 ವರ್ಷದೊಳಗಿನ ಇತರ ಮೂವರು ಯುವಕರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದರು.
Next Story





