ಆರೆಸ್ಸೆಸ್ ಪತ್ರಿಕೆ ಆರ್ಗನೈಸರ್ ನಲ್ಲಿ ಕಾಂಗ್ರೆಸ್ ಮುಖಂಡ ಸಿಂಘ್ವಿ ಬರೆದಿದ್ದೇನು ಗೊತ್ತೇ?

ನವದೆಹಲಿ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಆರೆಸ್ಸೆಸ್ ಪರ ಪತ್ರಿಕೆ ‘ಆರ್ಗನೈಸರ್’ನಲ್ಲಿ ವಾಕ್ ಸ್ವಾತಂತ್ರ್ಯ ಹಾಗೂ ದೇಶದ್ರೋಹದ ವಿಚಾರವಾಗಿ ಲೇಖನವೊಂದನ್ನು ಬರೆದಿದ್ದುಕಾಂಗ್ರೆಸ್ ನಾಯಕರಾದತಮಗೆ ಸಂಘ ಪರಿವಾರ ಪರಪತ್ರಿಕೆಯೊಂದರಲ್ಲಿ ಬರೆಯುವ ಅವಕಾಶ ದೊರೆತಿದ್ದು‘ವಾಕ್ ಸ್ವಾತಂತ್ರ್ಯದ ಶಕ್ತಿಯ ಸಂಕೇತ’ವೆಂದು ಅವರು ಹೇಳಿದ್ದಾರೆ. ಪತ್ರಿಕೆ ತನಗೊಂದು ಲೇಖನ ಬರೆದು ಕೊಡುವ ಸಲುವಾಗಿ ನನ್ನನ್ನು ಹಲವು ಹಾರಿ ಸಂಪರ್ಕಿಸಿದ ನಂತರವೇ ತಾನು ಒಪ್ಪಿದ್ದೆನೆಂದು ಸಿಂಘ್ವಿ ಹೇಳಿದ್ದಾರೆ ಹಾಗೂ ಇದನ್ನು ‘ಭಾರತದ ಸಂವಿಧಾನದ ವಿಜಯ’ವೆಂದು ಬಣ್ಣಿಸಿದ್ದಾರೆ.
ವಾಕ್ ಸ್ವಾತಂತ್ರ್ಯದ ಮಹತ್ವವನ್ನು ತಮ್ಮ ಲೇಖನದಲ್ಲಿ ಬಲವಾಗಿ ಪ್ರತಿಪಾದಿಸಿದ ಸಿಂಘ್ವಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ದೇಶದ್ರೋಹವನ್ನು ‘ವಿಚಿತ್ರ ಸಂಗಾತಿ’ಗಳೆಂದು ಬಣ್ಣಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯಲ್ಲಿ ದೇಶದ್ರೋಹದ ವಿಚಾರವಾಗಿರುವ ಸೆಕ್ಷನ್ ಗಳ ಅತಿಯಾದ ಉಪಯೋಗದ ವಿರುದ್ಧ ಎಚ್ಚರಿಸಿದ ಅವರುಇತ್ತೀಚೆಗೆ ಎಐಎಂಏಎಂ ಮುಖ್ಯಸ್ಥ ಓವೈಸಿಯ ವಿವಾದಾಸ್ಪದ ಹೇಳಿಕೆಗಳು ಛೀಮಾರಿಗೆ ಗುರಿಯಾಗುವಂತಹದ್ದು ಎಂದಿದ್ದಾರೆ. ಆದರೆ ಅವುಗಳು ಕೂಡ ದೇಶದ್ರೋಹವೆಂದೆನಿಸುವುದಿಲ್ಲ, ಎಂದು ಸಿಂಘ್ವಿ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.
‘‘ನಿಮ್ಮಲ್ಲಿ ಹೆಚ್ಚಿನವರಂತೆ ನಾನು ಕೂಡ ಕನ್ಹಯ್ಯಿ ಹೇಳಿದ್ದನ್ನು ಹೇಳ ಬಯಸುವುದಿಲ್ಲ ಹಾಗೂ ಓಮರ್ ಖಾಲಿದ್, ಬಿನಾಯಕ್ ಸೇನ್ ಅಥವಾ ಓವೈಸಿ ಮಾಡಿದ ರೀತಿ ಯಾ ಸಂಧರ್ಭದಲ್ಲಿ ಮಾಡುವುದಿಲ್ಲ. ಆದರೆ ಅವರು ಹೇಳಿದ್ದೆಲ್ಲ ದೇಶದ್ರೋಹವಾಗುವುದಿಲ್ಲ. ‘‘ಅವರನ್ನು ವಿರೋಧಿಸುವುದಕ್ಕೆ ಸಂವಿಧಾನ ನಮ್ಮನ್ನು ತಡೆಯದಂತೆ ಅದನ್ನು ಹೇಳುವ ಅಧಿಕಾರವನ್ನು ಸಂವಿಧಾನ ಅವರಿಗೆ ನಿರಾಕರಿಸುವುದಿಲ್ಲ,’’ಎಂದು ಸಿಂಘ್ವಿ ಬರೆದಿದ್ದಾರೆ.
‘‘ಸಂಘ ಪರಿವಾರದ ಹಾಗೂ ಈ ಮ್ಯಾಗಜೀನನ್ನು ನಡೆಸುವವರದೃಷ್ಟಿಕೋನಕ್ಕೆ ಭಿನ್ನವಾದ ದೃಷ್ಟಿಕೋನವನ್ನು ಪ್ರಸ್ತುತಪಡಿಸಲುನಾನಿಲ್ಲ ಪ್ರಯತ್ನಿಸಿದ್ದೇನೆ,’’ಎಂದು ಸಿಂಘ್ವಿ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯತೆಯ ವಿಚಾರವಾಗಿ ಬಿಜೆಪಿ ಎಬ್ಬಿಸಿರುವ ಚರ್ಚೆಯನ್ನು ಉಲ್ಲೇಖಿಸಿದ ಅವರು ‘ರಾಷ್ಟ್ರೀಯತೆಯನ್ನು ಯಾರಿಗಾದರೂ ಚುಚ್ಚಲು, ಅಥವಾ ತಯಾರಿಸಲು ಯಾ ಕರಪತ್ರದಂತೆ ಹಂಚಲು ಸಾಧ್ಯವಿಲ್ಲ. ರಾಷ್ಟ್ರೀಯತೆಯ ಭಾವನೆ ನಮ್ಮ ಹೃದಯ ಮತ್ತು ಆತ್ಮದಲ್ಲಿ ಅರಳಬೇಕು,’’ಎಂದರು.







