ಅಬುಧಾಬಿಯಿಂದ ಬಂದವನಿಂದ 2.5 ಕೆಜಿ ಚಿನ್ನ ವಶಕ್ಕೆ !

ಚೆನ್ನೈ, ಮಾ. 31 : ಅಬುಧಾಬಿಯಿಂದ ಗುರುವಾರ ಮುಂಜಾನೆ ಚೆನ್ನೈ ಗೆ ಬಂದಿಳಿದ ಪ್ರಯಾನಿಕನೊಬ್ಬನ ಬಳಿ ಸುಮಾರು 85 ಲಕ್ಷ ರೂಪಾಯಿ ಮೌಲ್ಯದ 2.5 ಕೆಜಿ ಚಿನ್ನ ಇದ್ದಿದ್ದು ಅದನ್ನು ವಶಕ್ಕೆ ಪಡೆಯಲಾಗಿದೆ .
ಕೇರಳದವನೆಂದು ಹೇಳಲಾದ ಈ ವ್ಯಕ್ತಿ ಹ್ಯಾಂಡ್ ಬ್ಯಾಗ್ ನಲ್ಲಿ ಈ ಚಿನ್ನವನ್ನು ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ಕಂದಾಯ ಬೇಹು ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Next Story





