ಗಾಝಿಯಾಬಾದ್ : ಮನೆಗೆ ನುಗ್ಗಿ ದಲಿತ ಬಾಲಕಿಯ ಅತ್ಯಾಚಾರ - ಸೀಮೆ ಎಣ್ಣೆ ಸುರಿದು ಬಾಲಕಿ ಆತ್ಮಹತ್ಯೆ ಯತ್ನ
ಶೆ. 50ರಷ್ಟು ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು!
.jpeg)
ಗಾಝಿಯಾಬಾದ್, ಮಾರ್ಚ್. 31; ಇಲ್ಲಿನ ಕವಿನಗರ ಠಾಣಾ ವ್ಯಾಪ್ತಿಯ ಕಾಲನಿಯೊಂದರ ಮನೆಗೆ ನುಗ್ಗಿ ದಲಿತ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು(16) ಎಂಬಿಎ ವಿದ್ಯಾರ್ಥಿಯೊಬ್ಬ ಅತ್ಯಾಚಾರಗೈದ ದಾರುಣ ಕೃತ್ಯ ನಡೆದಿರುವ ಕುರಿತು ವರದಿಯಾಗಿದೆ. ಅತ್ಯಾಚಾರಕ್ಕೀದ ಬಾಲಕಿ ಗಾಬರಿಗೊಂಡು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅವಳನ್ನು ಶೆ. 50ರಷ್ಟು ಸುಟ್ಟಗಾಯಗಳಿರುವ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪೊಲೀಸರು ಅತ್ಯಾಚಾರ. ಪೊಕ್ಸೊ/ಎಸ್ಟಿ ಸೆಕ್ಷನ್ ಪ್ರಕಾರ ಕೇಸು ದಾಖಲಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಅವನ ಜೊತೆಗಾರ ಓಡಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಸಿಒ ಮನೀಷ್ ಮಿಶ್ರರು ಘಡನೆಯು ಮಂಗಳವಾರ ಸಂಜೆಯ ವೇಳೆಗೆ ನಡೆದಿದೆ. ಮತ್ತು ಬಾಲಕಿ ಎಂಟನೆಯ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ ಎಂದು ತಿಳಿಸಿದ್ದಾರೆ.
Next Story





